ಡಿ.18, 19ರಂದು ಮಂಗಳೂರು ನಗರದ ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು: ಬಿಜೈ 110/33/11 ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ವಿವೇಕನಗರ ಫೀಡರ್ ವ್ಯಾಪ್ತಿಯಲ್ಲಿ ಡಿ.18 ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
ಈ ಫೀಡರ್‌ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಬಳ್ಳಾಲ್‌ಬಾಗ್, ವುಡ್‌ಲ್ಯಾಂಡ್, ಕಲ್ಯಾಣ್ ಜ್ಯುವೆಲರಿ, ಗಣೇಶ್ ಬೀಡಿ, ಫ್ರಾನ್ಸಿನ್ಸ್ ಕೋರ್ಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸಾಂ ಪ್ರಕಟನೆ ತಿಳಿಸಿದೆ.
ಡಿ.19 ರಂದು ನಗರದ ವಿವಿಧೆಡೆ ವಿದ್ಯುತ್ ನಿಲುಗಡೆ
ಕದ್ರಿ 33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಬೆಂದೂರು ಫೀಡರ್ ವ್ಯಾಪ್ತಿಯಲ್ಲಿ ಡಿ.19 ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
ಈ ಫೀಡರ್ ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಕೈಕೊಳ್ಳಲಾಗಿದೆ. ಹಾಗಾಗಿ 3ನೇ ಕ್ರಾಸ್, ರಾಧಾ ಮೆಡಿಕಲ್, ಬೆಂದೂರುವೆಲ್ ಸರ್ಕಲ್, ಲೋವರ್ ಬೆಂದೂರು, ಕೊಲಾಸೊ ಹಾಸ್ಪಿಟಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಕಂಕನಾಡಿ ಫಳ್ನೀರ್ : ಕಂಕನಾಡಿ 33/11ಕೆವಿ ಉಪಕೇಂದ್ರದಿಂದ ಹೊರಡುವ 11ಕೆವಿ ಫಳ್ನೀರ್ ಫೀಡರ್ ವ್ಯಾಪ್ತಿಯಲ್ಲಿ ಡಿ. 19ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ. ಈ ಫೀಡರ್‌ನಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹಾಗಾಗಿ ಕಂಕನಾಡಿ ಮಾರ್ಕೇಟ್, ಹೈಲ್ಯಾಂಡ್, ಯುನಿಟಿ ಆಸ್ಪತ್ರೆ, ಸೈಂಟ್ ಮೇರಿಸ್ ಸ್ಕೂಲ್, ವಾಸ್ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸಾಂ ಪ್ರಕಟನೆ ತಿಳಿಸಿದೆ.
*ಯೆಯ್ಯಾಡಿ/ಪಚ್ಚನಾಡಿ: ಎಸ್.ಆರ್.ಎಸ್ 220 ಕೆವಿ ಕಾವೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಯೆಯ್ಯಾಡಿ, ಹರಿಪದವು, ಬಜ್ಪೆ, ಪಚ್ಚನಾಡಿ, ವಾಮಂಜೂರು, ಬ್ರಿಗೇಡ್ ಯು.ಜಿ ಕೇಬಲ್ ಹಾಗೂ ಪ್ರೊವಿಡೆಂಟ್ ಯು.ಜಿ ಕೇಬಲ್ ಫೀಡರ್‌ಗಳ ವ್ಯಾಪ್ತಿಯಲ್ಲಿ ಡಿ.19 ರಂದು ವಿದ್ಯುತ್ ನಿಲುಗಡೆಗೊಳ್ಳಲಿದೆ.
ಈ ಫೀಡರ್‌ಗಳಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಕೆ.ಪಿ.ಟಿ.ಸಿ.ಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಹೀಗಾಗಿ ಮೇರಿಹಿಲ್, ಯೆಯ್ಯಾಡಿ, ಹರಿಪದವು, ಕುಂಟಲ್ಪಾಡಿ, ಕೆ.ಪಿ.ಟಿ, ಉದಯನಗರ, ಗುರುನಗರ, ಪ್ರಶಾಂತಿನಗರ,ಲ್ಯಾಂಡ್ ಲಿಂಕ್ಸ್, ಪೆರ್ಲಗುರಿ, ಪದವಿನಂಗಡಿ, ಬೊಲ್ಪುಗುಡ್ಡೆ, ಮುಗ್ರೋಡಿ, ಕೆ.ಪಿ.ಟಿ.ಸಿ.ಎಲ್ ಕಾಲೊನಿ, ಕೆ.ಎಚ್.ಬಿ.ಕಾಲೊನಿ, ಮಹಾತ್ಮನಗರ, ಬೋಂದೆಲ್, ಕೃಷ್ಣನಗರ, ಬಾರೆಬೈಲು, ಲ್ಯಾಂಡ್ ಲಿಂಕ್ಸ್ ಟೌನ್‌ಶಿಪ್, ಅಚ್ಚುಕೋಡಿ, ಪಚ್ಚನಾಡಿ, ಕಾರ್ಮಿಕನಗರ, ಮಂಗಳಜ್ಯೋತಿ,ವಾಮಂಜೂರು, ಬ್ರಿಗೇಡ್ ಅಪಾರ್ಟ್ ಮೆಂಟ್, ಪ್ರೊವಿಡೆಂಟ್ ಅಪಾರ್ಟ್‌ಮೆಂಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
*ಸುರತ್ಕಲ್,ಕಾಟಿಪಳ್ಳ: ಕಾಟಿಪಳ್ಳ 33/11 ಕೆವಿ ಉಪಕೇಂದ್ರದಿಂದ ಹೊರಡುವ 11 ಕೆವಿ ತಡಂಬೈಲು, ಕಾನ, ಸುರತ್ಕಲ್ ಫೀಡರ್ ಗಳ ವ್ಯಾಪ್ತಿಯಲ್ಲಿ ಡಿ. 19ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ನಿಲುಗಡೆಗೊಳ್ಳಲಿದೆ.
ಬೆಳಗ್ಗೆ ಸುರತ್ಕಲ್ ಶಾಖಾ ವ್ಯಾಪ್ತಿಯ ರೈಲ್ವೇ ಬ್ರಿಡ್ಜ್ ಹತ್ತಿರ ರಸ್ತೆಗೆ ಕಾಂಕ್ರೀಟ್ ಅಳವಡಿಸುತ್ತಿರುವುದರಿಂದ, ವಿದ್ಯುತ್ ಕಂಬವನ್ನು ಸ್ಥಳಾಂತರಗೊಳಿಸಲು ಮಹಾನಗರ ಪಾಲಿಕೆಯಿಂದ ಕೋರಿರುವುದರಿಂದ ಈ ಫೀಡರ್‌ಗಳ ವ್ಯಾಪ್ತಿಯ ಸುರತ್ಕಲ್, ಕಾನ, ಕಟ್ಲ, ಗುಡ್ಡೆಕೊಪ್ಲ, ಸಸಿಹಿತ್ಲು, ಎನ್‌ಐಟಿಕೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.