ಡಿ.26:ಪುತ್ತೂರಿನಲ್ಲಿ ಬಹುಭಾಷಾ ಕವಿಗೋಷ್ಠಿ

Update: 2024-12-23 12:00 GMT

ಮಂಗಳೂರು, ಡಿ.23: ಕರ್ನಾಟಕ ಭಾವೈಕ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಇಕ್ಬಾಲ್ ಬಾಳಿಲ ಬರೆದಿರುವ 'ಮಾದಕತೆ ಮಾರಣಾಂತಿಕ' ಪುಸ್ತಕ ಬಿಡುಗಡೆಯ ಅಂಗವಾಗಿ ಡಿ.26ರಂದು ಸಂಜೆ 4:30ಕ್ಕೆ ಪುತ್ತೂರು ಸುದಾನ ಮೈದಾನದಲ್ಲಿ ರಾಜ್ಯ ಮಟ್ಟದ ಬಹುಭಾಷಾ ಕವಿಗೋಷ್ಠಿ ನಡೆಯಲಿದೆ.

ಸಾಹಿತಿ ಹೆಚ್.ಭೀಮರಾವ್ ವಾಷ್ಠರ್ ಸುಳ್ಯ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು, ಲೇಖಕ ಕೆ.ಎ.ಅಬ್ದುಲ್ ಅಝೀಝ್ ಪುಣಚ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಪುತ್ತೂರು ನಗರ ಪೋಲಿಸ್ ಠಾಣೆಯ ಎಸ್ಸೈ ಆಂಜನೇಯ ರೆಡ್ಡಿ ಆಶಯ ಭಾಷಣ ಮಾಡುವರು. ಪುಸ್ತಕ ಬಿಡುಗಡೆ ಸ್ವಾಗತ ಸಮಿತಿಯ ಅಧ್ಯಕ್ಷ ಅಶ್ರಫ್ ಶಾ ಮಾಂತೂರು ಅತಿಥಿಯಾಗಿ ಭಾಗವಹಿಸಲಿದ್ದಾರೆ.

ನಾರಾಯಣ ರೈ ಕುಕ್ಕುವಳ್ಳಿ, ಮನ್ಸೂರ್ ಮೂಲ್ಕಿ, ಡಾ. ಸುರೇಶ್ ನೆಗಳಗುಳಿ, ಎನ್.ಎಂ.ಹನೀಫ್ ನಂದರಬೆಟ್ಟು, ನಾರಾಯಣ ಕುಂಬ್ರ, ಅಶ್ರಫ್ ಅಪೋಲೋ, ಸಲೀಂ ಮಾಣಿ, ಝುನೈಫ್ ಕೋಲ್ಪೆ, ಎಂ.ಪಿ.ಬಶೀರ್ ಅಹ್ಮದ್ ಬಂಟ್ವಾಳ, ಗಣೇಶ್ ಪ್ರಸಾದ್ ಪಾಂಡೇಲು, ಶಂಶೀರ್ ಬುಡೋಳಿ, ಅಬ್ದುಲ್ ಸಮದ್ ಬಾವಾ ಪುತ್ತೂರು, ಎಂ.ಎ.ಮುಸ್ತಫಾ ಬೆಳ್ಳಾರೆ ಕವನ ವಾಚನ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News