ಡಿ.7-9: ಸಹ್ಯಾದ್ರಿ ಕಾಲೇಜಿನಲ್ಲಿ ತಾಂತ್ರಿಕ ಆವಿಷ್ಕಾರ ಸಂಭ್ರಮ ‘ಸಿನರ್ಜಿಯಾ 2023’

Update: 2023-12-04 11:00 GMT

ಮಂಗಳೂರು, ಡಿ.4: ಅಡ್ಯಾರಿನ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಡಿ.7ರಿಂದ 9ವರೆಗೆ ಮೂರು ದಿನಗಳ ‘ಸಿನರ್ಜಿಯಾ 2023’ ತಾಂತ್ರಿಕ ಆವಿಷ್ಕಾರ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.

ನಗರದ ಪ್ರೆಸ್ಕ್ಲಬ್ ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಸ್. ಇಂಜಗನೇರಿ, ‘ವೇರ್ ಇನ್ನೋವೇಶನ್ ಚೇಂಜಸ್ ದ ಫ್ಯೂಚರ್’ ಎಂಬ ಟ್ಯಾಗ್ ಲೈನ್ನೊಂದಿಗೆ ಜರುಗುವ ಸಿನರ್ಜಿಯಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಪ್ರದರ್ಶಿಸಲು, ಸಹವರ್ತಿಗಳೊಂದಿಗೆ ಮತ್ತು ಕೈಗಾರಿಕಾ ಮುಖಂಡರೊಂದಿಗೆ ಸಂಪರ್ಕ ಹೊಂದಲು, ಸಾಮಾಜಿಕ ಮತ್ತು ಕೈಗಾರಿಕಾ ಸವಾಲುಗಳನ್ನು ಪರಿಹರಿಸುವ ಮೂಲಕ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಲು ವೇದಿಕೆಯಾಗಿದೆ ಎಂದರು.

ಸಿನರ್ಜಿಯಾವು ಎಸ್.ಎಸ್.ಟಿ.ಎಚ್.(ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್), ಏರೋಫಿಲಿಯಾ ಮತ್ತು ಕೋಡ್ ಬ್ಲೇಜ್ ಎಂಬ ಮೂರು ವಿಭಿನ್ನ ಪರಿಕಲ್ಪನೆಗಳ ಸಮ್ಮಿಲನ ಎಂದು ಅವರು ಹೇಳಿದರು.

ಸಿನರ್ಜಿಯಾದ ಆರಂಭದ ದಿನ ಟ್ಯಾಲೆಂಟ್ ಹಂಟನ್ ಬಿ ವಿತ್ ಇಂಜಿನಿಯರಿಂಗ್ ಕಾರ್ಯಕ್ರಮದೊಂದಿಗೆ ಆರಂಭಗೊಂಡು ಟಾಪ್ 100 ತಂಡಗಳನ್ನು ಸಹ್ಯಾದ್ರಿಯ ಕ್ಯಾಂಪಸ್ ಗೆ ಆಹ್ವಾನಿಸಲಾಗತ್ತದೆ. 2ನೇ ದಿನ 'ಸಿನರ್ಜಿಯಾ'ದ ಉದ್ಘಾಟನೆ ನಡೆಯಲಿದೆ. ಈ ಸಂದರ್ಭ ಏರೋ ಮಾಡಲಿಂಗ್ ಸ್ಪರ್ಧೆ, ಬಾಟ್ ಈವೆಂಟ್ಗಳು ಮತ್ತು 20 ಗಂಟೆಗಳ ಹ್ಯಾಕಥಾನ್ ಈವೆಂಟ್ ಆರಂಭಗೊಳ್ಳಲಿದೆ. ಮೂರನೆ ದಿನ ಎಸ್.ಎಸ್.ಟಿ.ಎಚ್.ನ ಗ್ರಾಂಡ್ ಫಿನಾಲೆಯ ಪ್ರದರ್ಶನ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಮೂರು ದಿನಗಳ ಕಾರ್ಯಕ್ರಮದಲ್ಲಿ 200ಕ್ಕೂ ಅಧಿಕ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಾಲೇಜಿನ ಮೂಲ ವಿಜ್ಞಾನ ವಿಭಾಗದ ಎಚ್.ಒ.ಡಿ. ಡಾ.ಪ್ರಶಾಂತ್ ರಾವ್ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಮ್ಯುನಿಟಿ ಮ್ಯಾನೇಜರ್ ವಿಷ್ಣು, ಸಂಯೋಜಕರಾದ ಪ್ರಜ್ವಲ್ ಹಾಗೂ ವಿಧಿಶಾ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News