ಕಬಕದಲ್ಲಿ ಟ್ರಾಫಿಕ್ ಪೊಲೀಸರಿಂದ ನಿತ್ಯ ಕಿರುಕುಳ ಆರೋಪ: ಶಾಸಕರಿಗೆ ದೂರು

Update: 2024-08-27 11:37 GMT

ಪುತ್ತೂರು: ಪುತ್ತೂರು ಟ್ರಾಫಿಕ್ ಪೊಲೀಸರಿಂದ ಕಬಕದ ಸಾರ್ವಜನಿಕರಿಗೆ ನಿತ್ಯ ಕಿರುಕುಳ ಆಗುತ್ತಿದ್ದು ಇದರ ವಿರುದ್ದ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕಬಕದ ಸಾರ್ವಜನಿಕರ ನಿಯೋಗವೊಂದು ಶಾಸಕ ಅಶೋಕ್ ರೈ ಮನವಿ ಮಾಡಿದೆ.

ಸ್ಥಳೀಯ ಮುಂದಾಳು ಮೋಹನ್ ಗುರ್ಜಿನಡ್ಕ ನೇತೃತ್ವದಲ್ಲಿ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಪ್ರತೀ ದಿನ ಬೆಳಿಗ್ಗೆ 8.30 ಕ್ಕೆ ಕಬಕಕ್ಕೆ ಬರುವ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನೆಪದಲ್ಲಿ ಬೈಕ್ ಸವಾರರಿಗೆ ನಿತ್ಯ ತೊಂದರೆ ನೀಡುತ್ತಿ ದ್ದಾರೆ. ಬೆಳಿಗ್ಗೆ ಶಾಲಾ ಮಕ್ಕಳನ್ನು ಬಸ್ಸಿಗೆ ಬಿಡಲು ಪೋಷಕರು ಮಕ್ಕಳನ್ನು ಬೈಕಿನಲ್ಲಿ ಕೂರಿಸಿಕೊಂಡು ಬರುವಾಗಲೂ ಅಡ್ಡಗಟ್ಟುವ ಪೊಲೀಸರು ಮಕ್ಕಳಿಗೆ ಹೆಲ್ಮೆಟ್ ಇಲ್ಲ ಎಂದು ಹೇಳಿ 500 ದಂಡ ವಿಧಿಸುತ್ತಿದ್ದಾರೆ. ಇದರಿಂದ ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗುತ್ತಿದೆ. ಪೊಲೀಸರ ಕಿರಿಕಿರಿಯಿಂದಾಗಿ ಸಾರ್ವಜನಿಕರು ಹೈರಾಣಾಗಿದ್ದು ಇವರ ವಿರುದ್ಧ ಕ್ರಮಕೈಗೊಳ್ಳುವಂತೆ ಮತ್ತು ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆ ನೀಡದಂತೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮನವಿ ಸ್ವೀಕರಿಸಿದ ಶಾಸಕರು ಸಾರ್ವಜನಿಕರಿಗೆ ವಿನಾ ಕಾರಣ ತೊಂದರೆ ನೀಡದಂತೆ ಸೂಚನೆಯನ್ನು ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News