ಕೆಲರಾಯ್: ಕ್ರಿಸ್ಮಸ್ ಆಚರಣೆ

Update: 2024-12-23 12:03 GMT

ಮಂಗಳೂರು, ಡಿ.23: ಸೈಂಟ್ ಆನ್ನಾ ಚರ್ಚ್ ಕೆಲರಾಯ್ ಇದರ ಪಾಲನಾ ಮಂಡಳಿ ಆಯೋಜಿಸಿದ ’ಬಂಧುತ್ವ ಕ್ರಿಸ್ಮಸ್ 2024 ಕಾರ್ಯಕ್ರಮವು ಡಿ.22ರಂದು ಕೆಲರಾಯ್ ಗೋಲ್ಡನ್ ಜ್ಯುಬಿಲಿ ಸಭಾಂಗಣದಲ್ಲಿ ನಡೆಯಿತು.

ಕೆಲರಾಯ್ ಚರ್ಚ್ ಧರ್ಮಗುರು ಫಾ. ಸಿಲ್ವೆಸ್ಟರ್ ಡಿಕೊಸ್ಟಾ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಬಿಜೈ ಲೂರ್ಡ್ಸ್ ಶಾಲೆಯ ನಿವೃತ್ತ ಶಿಕ್ಷಕ ಆನಂದ ಮಾಸ್ಟರ್, ಮಲಾರ್ ಅರಸ್ತಾನದ ಅಲ್‌ಮುಬಾರಕ್ ಜುಮಾ ಮಸೀದಿಯ ಖತೀಬ್ ಮುಹಮ್ಮದ್ ಶಫೀಖ್ ಕೌಸರಿ ಕುಕ್ಕಾಜೆ, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ್, ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂತೋಷ್ ಡಿಕೊಸ್ತಾ, ಕಾರ್ಯದರ್ಶಿ ಸೆಲಿನ್ ಡಿಮೆಲ್ಲೊ, ಆಯೋಗಗಳ ಸಂಯೋಜಕಿ ಲೂಸಿ ರೊಡ್ರಿಗಸ್, ಫಾತಿಮಾ ಕಾನ್ವೆಂಟಿನ ಸುಪೀರಿಯರ್ ಸಿಸ್ಟರ್ ಸಿಸಿಲಿಯಾ ಕ್ರಾಸ್ತಾ ಹಾಗೂ ಆರೋಗ್ಯಮಾತಾ ಕಾನ್ವೆಂಟಿನ ಸಿಸ್ಟರ್ ಜಿ.ಜಿ. ಭಾಗವಹಿಸಿದ್ದರು.

ಐಸಿವೈಎಮ್ ಸದಸ್ಯರು ಪ್ರಾರ್ಥನಾ ಗೀತೆ ಹಾಡಿದರು. ’ಮೇರಿಸ್ ಬಾಯ್ ಚೈಲ್ಡ್’ ಎಂಬ ಹಾಡನ್ನು ಭರತನಾಟ್ಯ ರೂಪದಲ್ಲಿ ನಡೆಸಲಾಯಿತು. ಸೈಂಟ್ ಆನ್ನಾ ಶಾಲಾ ಮಕ್ಕಳು ವಿವಿಧ ಧರ್ಮಗಳ ನೃತ್ಯ ಹಾಗೂ ಕ್ರಿಸ್ಮಸ್ ಟ್ಯಾಬ್ಲೊ ಪ್ರದರ್ಶಿಸಿದರು.

ಸಂತೋಷ್ ಡಿಕೋಸ್ತ ಸ್ವಾಗತಿಸಿದರು. ಗೋಡ್ವಿನ್ ವಾಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News