ಹಸಿರು ಹೆದ್ದಾರಿ ನೀತಿ ಅನುಷ್ಠಾನಕ್ಕೆ ಎನ್‌ಎಚ್‌ಎಐ ಹಿಂದೇಟು ಆರೋಪ: ಎನ್‌ಜಿಟಿ ಆದೇಶ ಪಾಲಿಸದಿದ್ದರೆ ಮಾನನಷ್ಟ ಸಲ್ಲಿಕೆಯ ಎಚ್ಚರಿಕೆ

Update: 2024-12-23 13:29 GMT

ಮಂಗಳೂರು: ರಾಷ್ಟ್ರೀಯ ಹೆದ್ದಾರಿಗಳ ಅಗಲೀಕರಣ ಮತ್ತು ನೇರಗೊಳಿಸುವಿಕೆ (ಸ್ಟ್ರೇಟನಿಂಗ್)ಗೆ ಸಂಬಂಧಿಸಿ ಜಾರಿಗೊಳಿಸಲಾಗರುವ ಹಸಿರು ಹೆದ್ದಾರಿ ನೀತಿ 2015ರ ಅನುಷ್ಟಾನವನ್ನು ಈವರೆಗಿನ ಕಾಮಗಾರಿಗಳಲ್ಲಿ ಅಳವಡಿಕೆ ಮಾಡದಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ)ವು ಇತ್ತೀಚೆಗೆ ನೀಡಿರುವ ತೀರ್ಪಿನಲ್ಲಿ ನೀತಿಯ ಅನುಸರಣೆಗೆ ಸೂಕ್ತ ನಿರ್ದೇಶನ ನೀಡಲು ಭಾರತ ಸರಕಾರದ ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಗೆ ಆದೇಶಿದೆ. ಈ ಆದೇಶ ಪಾಲಿಸದಿದ್ದೆರ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಂಘವು ಎನ್‌ಜಿಟಿಯಲ್ಲಿ ಮಾನನಷ್ಟ ಅರ್ಜಿ ಸಲ್ಲಿಸುವ ಎಚ್ಚರಿಕೆ ನೀಡಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ಬೆನೆಡಿಕ್ಟ್ ಫೆರ್ನಾಂಡಿಸ್ ಮಾಹಿತಿ ನೀಡಿದರು.

ಭಾರತದಲ್ಲಿ ಕಳೆದ 10 ವರ್ಷಗಳಲ್ಲಿ 30000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ನೇರಗೊಳಿಸುವ ಕಾರ್ಯ ಆಗಿದೆ. ಈ ಯೋಜನೆಗಾಗಿ ಹಸಿರು ನೀತಿಯ ಅಳವಡಿಕೆಯ ಅನುಪಸ್ಥಿತಿಯಲ್ಲಿ ಅಪಾರ ಸಂಖ್ಯೆಯ ಮರಗಳನ್ನು ಕಡಿಯ ಲಾಗಿದ್ದು ಅರಣ್ಯ ಮತ್ತು ಪರಿಸರಕ್ಕೆ ಅಪಾರ ಹಾನಿಯಾಗಿದೆ. ಇನ್ನೂ 1,16,000 ಕಿ.ಮೀ. ಹೆದ್ದಾರಿ ಅಗಲೀಕರಣ ಮತ್ತು ಬಲವರ್ಧನೆಗೆ ಬಾಕಿ ಉಳಿದಿದೆ. ನಮ್ಮ ಸಂಘ ಚಾಲ್ತಿಯಲ್ಲಿರುವ ಹಾಗೂ ಭವಿಷ್ಯದ ಯೋಜನೆಗಳ ಮೇಲೆ ನಿಗಾ ಇರಿಸಿದೆ ಎಂದರು.

ಹಸಿರು ಹೆದ್ದಾರಿ ನೀತಿಯಡಿ ಮರಗಳ ನೆಡುವಿಕೆ, ಸ್ಥಳಾಂತರ ಮತ್ತು ಸುಂದರೀಕರಣಗೊಳಿಸುವುದು ಹೆದ್ದಾರಿ ಪ್ರಾಧಿಕಾ ರದ ಜವಾಬ್ಧಾರಿ. ಮರಗಳ ಸ್ಥಳಾಂತರಕ್ಕಾಗಿ ಎಂಪನಲ್‌ಮೆಂಟ್ ಏಜೆನ್ಸಿಗಳು ಮತ್ತು ನೆಡುತೋಪಿಗಾಗಿ ಪ್ರತ್ಯೇಕ ಏಜೆನ್ಸಿಗಳ ನೇಮಕಾತಿ, ಯೋಜನಾ ವೆಚ್ಚದ ಶೇ. 1ರಷ್ಟು ಹಸಿರು ನಿಧಿಗೆ ವರ್ಗಾವಣೆಗೆ, ಎಂಪನಲ್‌ಮೆಂಟ್ ಏಜೆನ್ಸಿ ಯಿಂದ ಆಯ್ಕೆಯಾದ ವಿಶೇಷ ಗ್ತಿಗೆದಾರರು ಹಸಿರು ನೀತಿಯಲ್ಲಿ ನಿಗದಿಪಡಿಸಿದ ಮಾನದಂಡಗಳು ಮತ್ತು ಕಾಲಮಿತಿಗೆ ಅನುಗುಣವಾಗಿ ಗರಿಷ್ಟ ಸಂಖ್ಯೆಯ ಮರಗಳನ್ನು ಸ್ಥಳಾಂತರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸಂಘವು ಸಾಣೂರಿನಿಂದ ಬಿಕರ್ನಕಟ್ಟೆಯ ರಾ. ಹೆ. 169ರ 698.850 ಕಿ.ಮೀ. ನಿಂದ 744.190 ಕಿ.ಮೀ., ವಾಹನ ಮೇಲ್ಸೇತುವೆ ಮತ್ತು ಸೇವಾ ರಸ್ತೆ, ಪುಲ್ಕೇರಿ ಕಾರ್ಕಳದದಿಂದ ಮಾಳಾ ಗೇಟ್‌ನ ಚತುಷ್ಪಥ ರಸ್ತೆಯ ಪರಿಶೀಲನೆಯ ವೇಳೆ ಹಸಿರು ನೀತಿ ಜಾರಿಯಾ ಗದಿರುವುದು ಕಂಡುಬಂದಿತ್ತು. ಇದಕ್ಕಾಗಿ 2024ರ ಜನವರಿ 29ರಂದು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಮನವಿ ಮಾಡಲಾ ಗಿತ್ತು. ಆದರೆ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಂದ ಪ್ರತಿಕ್ರಿಯೆ ದೊರಕದಾಗ ಎನ್‌ಜಿಟಿಯಲ್ಲಿ ದಾವೆ ಹೂಡಲಾ ಗಿತ್ತು. ನ್ಯಾಯಮಂಡಳಿಯು ನಮ್ಮ ಮನವಿ ಪುರಸ್ಕರಿಸಿ ಆದೇಶ ನೀಡಿದೆಯಲ್ಲದೆ, ಹಸಿರು ನೀತಿ ಅನುಸರಣೆಗೆ ಸೂಕ್ತ ನಿರ್ದೇಶನಕ್ಕೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿಗೆ ಆದೇಶ ನೀಡಿದೆ ಎಂದವರು ವಿವರಿಸಿದರು.

ಎನ್‌ಜಿಟಿ ಆದೇಶದಲ್ಲಿ ಸ್ವತಂತ್ರ ಮೇಲ್ವಿಚಾರಣಾ ಸಮಿತಿ ನೇಮಿಸಿ ಅಥವಾ ನ್ಯಾಯಮಂಡಳಿಗೆ ತಿಳಿಸಲಾಗಿರುವ ಯೋಜನೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಹಸಿರು ನೀತಿಯ ಅನುಸರಣೆ ಮತ್ತು ರಾಷ್ಟ್ರ ವ್ಯಾಪಿ ಎಲ್ಲಾ ರೀತಿಯ ಯೋಜನೆ ಗಳಿಗೆ ನಿಯತಕಾಲಿಕ ಅನುಸರಣೆ ವರದಿ ಸಲ್ಲಿಸಲು ಪ್ರತಿವಾದಿಗಳಿಗೆ ನಿರ್ದೇಶಿಸುವಂತೆ ಸೂಚಿದೆ. ಹಸಿರು ನೀತಿ ಉಲ್ಲಂಘಿಸಿದ ಪ್ರತಿವಾದಿಗಳ ವಿರುದ್ಧ ಅನುಕರಣೀಯ ವೆಚ್ಚ ವಿಧಿಸುವಂತೆಯೂ ನ್ಯಾಯಮಂಡಳಿ ಆದೇಶಿಸಿದೆ ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಸಂಘದ ಕೋಶಾಧಿಕಾರಿ ದಿಲೀಪ್ ವಾಸ್, ಉಪಾಧ್ಯಕ್ಷೆ ಆರತಿ ಅಶೋಕ್, ಸದಸ್ಯರಾದ ಅಶ್ವಿನಿ ಕೆ. ಭಟ್, ಅದಿತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News