ಸ್ನೇಹಾಲಯ ಪುನರ್ವಸತಿ ಕೇಂದ್ರದಲ್ಲಿ ಸ್ನೇಹ ಮಿಲನ
Update: 2024-12-23 12:02 GMT
ಮಂಜೇಶ್ವರ, ಡಿ.23: ಸ್ನೇಹಾಲಯ ಸೈಕೊ ಸೋಶಿಯಲ್ ಪುನರ್ವಸತಿ ಕೇಂದ್ರದಲ್ಲಿ ಸ್ನೇಹ ಮಿಲನ-2024 ಎಂಬ ಕ್ರಿಸ್ಮಸ್ ಕಾರ್ಯಕ್ರಮವನ್ನು ಡಿ.21ರಂದು ಆಚರಿಸಲಾಯಿತು. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾದ್ಯಾವಯ್ಯ, ಮಂಗಳೂರು ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಕಾಶ್ ಡಿ.ಎಸ್., ಹೊಸಂಗಡಿಯ ಇನ್‌ಫೆಂಟ್ ಜೀಸಸ್ ಚರ್ಚ್‌ನ ಧರ್ಮಗುರು ಫಾ. ಲೋಯಸ್ ಮರಿಯದಾಸ್, ಸ್ನೇಹಾಲಯದ ನಿವಾಸಿ ಗುರುಗಳಾದ ಫಾ. ಸಿರಿಲ್ ಡಿಸೋಜ, ಫಾರ್ಚೂನ್ ಲೈಫ್ ವೆಲ್ತ್ ಪ್ರೈ.ಲಿ. ದೆಹಲಿ ಇದರ ನಿರ್ದೇಶಕ ಜೋಸೆಫ್ ಇಲಿಯಾಸ್ ಮಿನೇಜಸ್, ರಫೀಕ್ ಮಾಸ್ಟರ್ ಮತ್ತಿತರು ಅತಿಥಿಗಳಾಗಿ ಭಾಗವಹಿಸಿದ್ದರು.
ಸ್ನೇಹಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಜೋಸೆಫ್ ಕ್ರಾಸ್ತಾ ಸ್ವಾಗತಿಸಿದರು. ಕಾರ್ಯದರ್ಶಿ, ಟ್ರಸ್ಟಿ ಒಲಿವಿಯಾ ಕ್ರಾಸ್ತಾ ವಂದಿಸಿದರು. ಜಿಯೋ ಡಿಸಿಲ್ವಾ ಕಾರ್ಯಕ್ರಮ ನಿರೂಪಿಸಿದರು.