ಅನಂತಾಡಿ: ತಾಲೀಮು ಮಾಸ್ಟರ್ ನಾಗಪ್ಪ ಪೂಜಾರಿ ನಿಧನ

Update: 2024-06-16 07:39 GMT

ಬಂಟ್ವಾಳ : ಅನಂತಾಡಿ ಗ್ರಾಮದ ಬಾಬಣಕಟ್ಟೆ ನಿವಾಸಿ ನಾಗಪ್ಪ ಪೂಜಾರಿ (74) ಹೃದಯಾಘಾತದಿಂದ ಭಾನುವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಅನಂತಾಡಿ ಗ್ರಾಮದಲ್ಲಿ ಯುವಕರ ತಂಡಗಳನ್ನು ಸ್ಥಾಪಿಸಿ ಅವರಿಗೆ ತಾಲೀಮು ತರಬೇತಿಗಳನ್ನು ನೀಡುತ್ತಿದ್ದ ಇವರು ತಾಲೀಮು ಮಾಸ್ಟರ್ ನಾಗಪ್ಪಣ್ಣ ಎಂದೇ ಪ್ರಸಿದ್ಧರಾಗಿದ್ದರು.

ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದ ಇವರು ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ, ನಾಟಕ ಇತ್ಯಾದಿ ಕಲಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಅನಂತಾಡಿ ಯುವಕ ಮಂಡಲದ ಸ್ಥಾಪಕ ಸದಸ್ಯರಾಗಿದ್ದ ಇವರು ವಿವಿಧ ಸಂಘ ಸಂಸ್ಥೆಗಳ ಸದಸ್ಯರಾಗಿ ಜನಾನುರಾಗಿಯಾದ್ದರು.

ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News