ಆ.30: ದ.ಕ.ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ
ಮಂಗಳೂರು, ಆ.29:ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಆ.30ರಂದು ದ.ಕ. ಜಿಲ್ಲೆಯ ಪ್ರವಾಸ ಕೈಗೊಳ್ಳಲಿದ್ದಾರೆ.
ಆ.30ರಂದು ಬೆಳಗ್ಗೆ 10ಕ್ಕೆ ದ.ಕ.ಜಿಪಂ ನೇತ್ರಾವತಿ ಸಭಾಂಗಣದಲ್ಲಿ 2024-25ನೇ ಸಾಲಿನ ಪ್ರಥಮ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಕೆಡಿಪಿ ಮುಂದುವರಿದ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸುವರು. ಅಪರಾಹ್ನ 3ಕ್ಕೆ ದ.ಕ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಎಂಆರ್‌ಪಿಎಲ್ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಸ್ಥಳೀಯರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಸಂಜೆ 5ಕ್ಕೆ ಪಣಂಬೂರು ಬೀಚ್‌ನಲ್ಲಿ ಪ್ಲಾಸ್ಟಿಕ್ ವೇಸ್ಟ್ ಕಲೆಕ್ಷನ್ ಕಿಯೋಸ್ಕ್ ಸೆಂಟರ್ ಉದ್ಘಾಟನೆ, ಸಂಜೆ 6ಕ್ಕೆ ನಗರದ ಇಂಡಿಯಾನ ಆಸ್ಪತ್ರೆಯ ಸಭಾಂಗಣದಲ್ಲಿ ಇಂಡಿಯಾನ ಕ್ಯಾನ್ಸರ್ ಕೇಂದ್ರದ ಅನಾವರಣ ಹಾಗೂ ಹೊಸ ಒಪಿ ಬ್ಲಾಕ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿ ಸುವರು. ರಾತ್ರಿ ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣಿಸುವರು ಎಂದು ಪ್ರಕಟನೆ ತಿಳಿಸಿದೆ.