ಮಕ್ಕಳಲ್ಲಿ ಮೊಬೈಲ್‌ನಿಂದಾಗುವ ಅನಾಹುತಗಳ ಜಾಗೃತಿ ಅಗತ್ಯ: ಮಮತಾ ಗಟ್ಟಿ

Update: 2023-11-11 16:12 GMT

ಮಂಗಳೂರು: ಮೊಬೈಲ್ ನಿಂದಾಗುವ ಅನಾಹುತಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಅಗತ್ಯ ಹಾಗೂ ಪೋಷಕರು, ಶಿಕ್ಷಕರು ಈ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಮಾಜಿ ಜಿಪಂ ಅಧ್ಯಕ್ಷ ಮಮತಾ ಗಟ್ಟಿ ಹೇಳಿದ್ದಾರೆ.

ನಗರದ ವೆಲೆನ್ಸಿಯಾದ ರೋಶಿನಿ ನಿಲಯದಲ್ಲಿ ಶನಿವಾರ ನಡೆದ ಮಕ್ಕಳ ಸಂಸತ್‌ನ ಸಂವಾದ ಕಾರ್ಯಕ್ರಮದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.

ಮಕ್ಕಳ ಸಂಸತ್ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ ಅವರು ಅವರು ಮಕ್ಕಳ ಧ್ವನಿಯಾಗಿ ಮಕ್ಕಳ ಸಂಸತ್ತು ಹೊರಹೊಮ್ಮಲಿ ಎಂದು ಶುಭಹಾರೈಸಿದರು.

ಸಂವಾದ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೇರೆಬೇರೆ ತಾಲೂಕುಗಳಿಂದ ಸುಮಾರು ೮೦ ಮಕ್ಕಳು ಭಾಗವಹಿಸಿ, ತಮ್ಮ ಪ್ರಶ್ನೆಗಳನ್ನು ಕೇಳುವುದರ ಮೂಲಕ ಜಿಲ್ಲೆಯ ಸಮಸ್ಯೆ ಮಕ್ಕಳ ಸಮಸ್ಯೆಗಳನ್ನು ಭಾಗವಹಿಸಿದ್ದ ಅಧಿಕಾರಿಗಳ ಗಮನಕ್ಕೆ ತಂದರು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ವಿದ್ಯಾರ್ಥಿ ಡಯಾನ ವೈ ಶೆಟ್ಟಿ, ಜೊಕಟ್ಟೆ ಅಂಜುಮಾನ್ ಯತೀಮ್ ಖಾನ್ ಮತ್ತು ಮಸಾಕೀನ್ ಸೆಂಟರ್‌ನ ಮಹಮ್ಮದ್ ಸಫ್ವಾನ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡರು.

ದ.ಕ.ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ನಯನಾ ವಿ ರೈ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದ.ಕ. ಜಿಲ್ಲಾ ಹಕ್ಕುಗಳ ಮಾಸೋತ್ಸವ ಸಮಿತಿ ಸಂಚಾಲಕ ನಂದಾ ಪಾಯಸ್, ದ.ಕ.ಜಿಲ್ಲಾ ಬಾಲ ನ್ಯಾಯ ಮಂಡಳಿಯ ಸದಸ್ಯೆ ಕಸ್ತೂರಿ ಬೋಳುವಾರು, ರೋಶನಿ ನಿಲಯದ ಪರೀಕ್ಷಾಂಗ ಕುಲ ಸಚಿವೆ ವಿನೀತಾ ರೈ, ಮಕ್ಕಳ ರಕ್ಷಣಾಧಿಕಾರಿ ಕುಮಾರ್, ಬೆಥನಿ ಸಮಾಜ ಸೇವಾ ಸಹೋದಯ ಸಂಸ್ಥೆಯ ಸಿಸ್ಟರ್ ಲೀನಾ ಉಪಸ್ಥಿತರಿದ್ದರು.

ಶಿಕ್ಷಣ ಸಂಪನ್ಮೂಲ ಕೇಂದ್ರದ ಉಷಾ ನಾಯ್ಕ್ ಸ್ವಾಗತಿಸಿದರು. ಮಂಗಳೂರು ಪಡಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೆನ್ನಿ ಡಿ ಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ವರಿ ಕಾರ್ಯಕ್ರಮ ನಿರೂಪಿಸಿದರು. ಯೋಗೀಶ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News