ಬಂಟ್ವಾಳ: ಮಹಿಳೆಗೆ ದ್ವಿಚಕ್ರ ವಾಹನ ಢಿಕ್ಕಿ; ಆಸ್ಪತ್ರೆಗೆ ದಾಖಲು
Update: 2023-10-15 05:12 GMT
ಬಂಟ್ವಾಳ : ರಸ್ತೆ ದಾಟುತ್ತಿದ್ದ ವೇಳೆ ಮಹಿಳೆಯೋರ್ವರಿಗೆ ದ್ವಿಚಕ್ರವಾಹನ ಢಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾದ ಘಟನೆ ಸಂಗಬೆಟ್ಟು ಗ್ರಾಮದ ಸಿದ್ದಕಟ್ಟೆ ಎಂಬಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಬಜಿರೆ ಗುಂಡುರಿ ಗ್ರಾಮದ ಕೆರೆಕೋಡಿ ನಿವಾಸಿ ತಂಗಮ್ಮ ( 73) ಗಾಯಗೊಂಡ ಮಹಿಳೆ.
ಸಿದ್ದಕಟ್ಟೆಯ ಖಾಸಗಿ ಕ್ಲಿನಿಕ್ ಒಂದರಲ್ಲಿ ಕೆಲಸಮಾಡುತ್ತಿರುವ ತಂಗಮ್ಮ ಅವರು ಚಹಾ ಕುಡಿಯಲು ಹೋಟೆಲ್ ಗೆ ಹೋಗುತ್ತಿರುವಾಗ ಬೈಕ್ ಢಿಕ್ಕಿಯಾಗಿದೆ.
ಘಟನೆಯಿಂದ ಗಾಯಗೊಂಡ ಮಹಿಳೆಗೆ ಮೂಡಬಿದಿರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ಮಂಗಳೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ .
ಬಂಟ್ವಾಳ ಸಂಚಾರಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.