ಬಂಟ್ವಾಳ: ಎ.ಎಂ.ಆರ್.ಡ್ಯಾಂ ಬಳಿ ನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆ
Update: 2023-11-04 09:28 GMT
ಬಂಟ್ವಾಳ: ಅಪರಿಚಿತ ವ್ಯಕ್ತಿಯ ಶವವೊಂದು ಶಂಭೂರು ಎ.ಎಂ.ಆರ್.ಡ್ಯಾಂ ನ ಬಳಿ ನೇತ್ರಾವತಿ ನದಿಯಲ್ಲಿ ಶನಿವಾರ ಪತ್ತೆಯಾಗಿದೆ.
ನದಿಯಲ್ಲಿ ಶವವೊಂದು ತೇಲಾಡುವುದು ಕಂಡು ಬಂದಿದ್ದನ್ನು ಗಮನಿಸಿದ ಎ.ಎಂ.ಆರ್.ಡ್ಯಾಂ ನ ಕಾರ್ಮಿಕರು ಗ್ರಾಮಾಂತರ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.
ಶವ ಸಂಪೂರ್ಣ ಕೊಳೆತು ಹೋಗಿದ್ದು ಸುಮಾರು 15 ದಿನಗಳ ಹಿಂದೆ ನದಿಗೆ ಬಿದ್ದಿರುವ ಬಗ್ಗೆ ಸಂಶಯವಿದೆ. ಮೃತ ವ್ಯಕ್ತಿ ಪುರುಷ ಅಥವಾ ಮಹಿಳೆಯಾ ಎಂಬುದನ್ನು ಗುರುತು ಹಿಡಿಯಲು ಅಸಾಧ್ಯವಾದ ಪರಿಸ್ಥಿತಿ ಇದ್ದು, ಕೈಯಲ್ಲಿ ಫ್ಯಾನ್ಸಿಯ ಬ್ರಾಸ್ಲೆಟ್ ಇದೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಶವವನ್ನು ಸಂಬಂಧಿಕರು ಗುರುತು ಪತ್ತೆ ಮಾಡುವವರೆಗೆ ಸಂರಕ್ಷಿಸುವ ದೃಷ್ಟಿಯಿಂದ ಬಂಟ್ವಾಳ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ ಎಂದು ಬಂಟ್ವಾಳ ಗ್ರಾಮಾಂತರ ಉಪ ನಿರೀಕ್ಷಕ ಹರೀಶ್ ತಿಳಿಸಿದ್ದಾರೆ.