ಬಂಟ್ವಾಳ: "ಸ್ಥೂರ್ತಿ ಸಂಜೀವಿನಿ" ಮಹಾಸಭೆ
ಬಂಟ್ವಾಳ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ "ಸ್ಥೂರ್ತಿ ಸಂಜೀವಿನಿ" ಇದರ ಮಹಾ ಸಭೆಯು ಕನ್ಯಾನ ಪಂಚಾಯತ್ ನ ಪಂಚಾಮೃತ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಸಂತಿ ಉದ್ಘಾಟಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕುಸುಮ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಕಾರ್ಯಾ ಚರಣೆ ಮಾಡುವ ಈ ಸಂಸ್ಥೆ ಮಹಿಳೆಯರಿಗೆ ತನ್ನ ಜೀವನದಲ್ಲಿ ಮುಂದೆ ಬಂದು ಯಾರು ತನ್ನ ಕಾಲ ಮೇಲೆ ತಾನು ನಿಂತು ಸ್ವಾವಲಂಬಿ ಬದುಕು ಮಾಡುವ ಮೂಲಕ ಜೀವನ ಮಾಡಿದರೆ ಮಾತ್ರ ಜೀವನ ಸಾರ್ಥಕ ಎಂದು ಹೇಳಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್. ಪಂಚಾಯತ್ ಕಾರ್ಯದರ್ಶಿ ಕರೀಂ. ಸಂಜೀವಿನಿ ಸಂಘದ ಅಧ್ಯಕ್ಷೆ ಪ್ರತಿಭಾ, ಉಪಾಧ್ಯಕ್ಷೆ ರೇವತಿ ಮಂಡ್ಯೂರು. ಎಂ.ಬಿ.ಕೆ.ಮಮತಾ ಮೊದಲಾದವರು ಉಪಸ್ಥಿತರಿದ್ದರು.
ವಿದ್ಯಾ ನಂದರಬೆಟ್ಟು ವರದಿ ವಾಚಿಸಿದರು. ರಮ್ಯಾ ಸ್ವಾಗತಿಸಿ, ಗುಲಾಬಿ ವಂದಿಸಿದರು. ಎಲ್.ಸಿ. ಆರ್.ಪಿ ಹೇಮಲತಾ ಕಾರ್ಯಕ್ರಮ ನಿರೂಪಿಸಿದರು.