ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್: ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ

Update: 2023-11-18 10:37 GMT

ಬಂಟ್ವಾಳ: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಇದರ ವತಿಯಿಂದ ಮಿಲಾದ್ ಪ್ರಯುಕ್ತ ದ.ಕ.ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವು ಶುಕ್ರವಾರ ಫರಂಗಿಪೇಟೆಯ ಸುಹಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.

ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದ ತುಂಬೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಕೆ.ಎನ್. ಗಂಗಾಧರ ಆಳ್ವ ಮಾತನಾಡಿ,  ಜಗತ್ತೆಂಬ ವಾಹನದಲ್ಲಿ ಮನುಜರೆಲ್ಲರೂ ಪ್ರಯಾಣಿಕರಿದ್ದಂತೆ, ಪರಸ್ಪರ ಧರ್ಮದ ಸಾರವನ್ನು ಅರ್ಥೈಸಿಕೊಂಡರೆ ಈ ಜಗತ್ತು ನೆಮ್ಮದಿಯ ತಾಣವಾಗಲಿದೆ ಎಂದು ಅಭಿಪ್ರಾಯಪಟ್ಟರು

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿ ಅಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಮಾತನಾಡಿ ಪ್ರಬಂಧ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ವಿದ್ಯಾರ್ಥಿಗಳಲ್ಲಿ ಓದುವ ಮತ್ತು ಅಧ್ಯಯನ ಶೀಲ ಮನೋಭಾವನೆ ಇದೆ ಎಂಬುದರ ಸಂಕೇತ ಎಂದರು . 

ಫರಂಗಿಪೇಟೆ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್,  ಖತೀಬ್ ಅಬ್ಬಾಸ್ ದಾರಿಮಿ, ಉದ್ಯಮಿ ಆಶಿರ್ ಮೇಲ್ಮನೆ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಸಂಯುಕ್ತ ಜಮಾಅತ್ ಪದಾಧಿಕಾರಿಗಳಾದ  ಬಿ.ಎಂ.ಅಬ್ಬಾಸ್ ಅಲಿ,  ಮುಹಮ್ಮದ್ ರಫೀಕ್ ಸುರಿಬೈಲು, ಹಕೀಂ ಪರ್ತಿಪ್ಪಾಡಿ, ಶೇಖ್ ರಹ್ಮತುಲ್ಲಾ ಕಾವಳಕಟ್ಟೆ, ಲತೀಫ್ ನೇರಳಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

ಪ್ರಬಂಧ ಸ್ಪರ್ಧೆಯ ಬಹುಮಾನ ವಿಜೇತರು

ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಖತೀಜಾ ರಾಸ್ಮಿ ಎನ್. ಪ್ರಥಮ, ಮಂಗಳೂರು ಸಂತ ಅಲೋಶಿಯಸ್ ಕಾಲೇಜು  ವಿದ್ಯಾರ್ಥಿನಿ ಜಾನ್ವಿ.ಪಿ.ವಿ. ಮತ್ತು ಬೆಳ್ತಂಗಡಿ ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಲಕ್ಷ್ಮಿಶ್ರೀ  ದ್ವಿತೀಯ  ಹಾಗೂ ಸುರತ್ಕಲ್ ಗೋವಿಂದ ದಾಸ ಕಾಲೇಜು ವಿದ್ಯಾರ್ಥಿನಿ ಶನಾ ಫರ್ಹಾನ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಮಾರ್ನಬೈಲ್ ಮೆಲ್ಕಾರ್ ಮಹಿಳಾ ಕಾಲೇಜಿನ ಫಾತಿಮತ್ ಶಮ್ರೀನಾ, ಕಲ್ಲಡ್ಕ ಅನುಗ್ರಹ ಮಹಿಳಾ ಕಾಲೇಜಿನ ನಫೀಸಾ ಮರ್ಝೂಕ, ಮಂಗಳೂರು ಸಂತ ಆಗ್ನೆಸ್ ಕಾಲೇಜಿನ ನಿಶಾತ್ ಫಾತಿಮಾ ಎ.ಆರ್. ಮುಡಿಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮುಹಮ್ಮದ್ ತಯ್ಯೂಬ್, ಮೂಡಬಿದ್ರೆ ಶ್ರೀ ಧವಳಾ ಕಾಲೇಜಿನ ತಸ್ಮೀಯ, ಮಂಗಳೂರು ಕರಾವಳಿ ಕಾಲೇಜಿನ ಇಮ್ರಾನ್ ಶೇಕ್ ಅಬ್ದುಲ್ ಖಾದರ್, ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ಮೆಲ್ರಿಯಾ ಮಚಾದೊ ಪ್ರೋತ್ಸಾಹಕ ಬಹುಮಾನ ಪಡೆದುಕೊಂಡರು.

ಇದೇ ವೇಳೆ ಪ್ರಬಂಧ ಸ್ಪರ್ಧೆಯ ಮೌಲ್ಯಮಾಪನ ಮಾಡಿದ ತುಂಬೆ ಪ.ಪೂ.ಕಾಲೇಜು ಉಪನ್ಯಾಸಕ ಡಿ.ಬಿ. ಅಬ್ದುಲ್ ರಹಿಮಾನ್, ಮುಹಮ್ಮದ್ ಅಲಿ ಕಮ್ಮರಡಿ, ಕಾರ್ಯಕ್ರಮ ಸಂಚಾಲಕರಾದ ಎಫ್.ಎಂ.ಬಶೀರ್ ಫರಂಗಿಪೇಟೆ, ಆಸಿಫ್ ಇಕ್ಬಾಲ್ ಫರಂಗಿಪೇಟೆ, ಪಿ.ಮುಹಮ್ಮದ್ ಪಾಣೆಮಂಗಳೂರು ಅವರನ್ನು ಗೌರವಿಸಲಾಯಿತು.

ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ವಿಜೇತರ ಪಟ್ಟಿ ವಾಚಿಸಿದರು. ಮುಹಮ್ಮದ್ ರಾಝಿಕ್ ಕಿರಾಅತ್ ಪಠಿಸಿದರು. ಸಂಯುಕ್ತ ಜಮಾಅತ್ ಉಪಾಧ್ಯಕ್ಷ ಎಂ.ಎಸ್.ಮುಹಮ್ಮದ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ನೋಟರಿ ಅಬೂಬಕ್ಕರ್ ವಿಟ್ಲ ವಂದಿಸಿದರು. ರಶೀದ್ ವಿಟ್ಲ ಹಾಗೂ ಹಕೀಂ ಕಲಾಯಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News