ಜ.19 ರಂದು ಬೆಳ್ಮ ರೆಂಜಾಡಿ ಉರೂಸ್ : ಎಂಟು ದಿನಗಳ ಧಾರ್ಮಿಕ ಉಪನ್ಯಾಸ
ಉಳ್ಳಾಲ: ಕೇಂದ್ರ ಜುಮ್ಮಾ ಮಸೀದಿ ಬೆಳ್ಮ ರೆಂಜಾಡಿ ಇಲ್ಲಿ ಅಂತ್ಯ ವಿಶ್ರಮ ಪಡೆಯುತ್ತಿರುವ ಹಝ್ರತ್ ಅಸ್ಸಯ್ಯದ್ ಅಬೂಸ್ವಾಲಿಹ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ನಡೆಸಿಕೊಂಡು ಬರುವ ಉರೂಸ್ ಕಾರ್ಯಕ್ರಮವು ಜ. 12 ರಂದು ಆರಂಭಗೊಂಡಿದ್ದು ಜ.19 ವರೆಗೆ ಜಮಾಅತ್ ಅಧ್ಯಕ್ಷ ಬಿ.ಆರ್ . ಮುಹಮ್ಮದ್ ಹನೀಫ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಬೆಳ್ಮ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಉರೂಸ್ ಸಮಿತಿ ಕಾರ್ಯದರ್ಶಿ ಸಫೀರ್ ಯು.ಎ. ತಿಳಿಸಿದ್ದಾರೆ.
ಅವರು ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ಈ ಕಾರ್ಯಕ್ರಮದ ಪ್ರಯುಕ್ತ ಎಂಟು ದಿನಗಳ ಕಾಲ ಧಾರ್ಮಿಕ ಮುಖಂಡರಿಂದ ಧಾರ್ಮಿಕ ಉಪನ್ಯಾಸ ಪ್ರತಿದಿನ ರಾತ್ರಿ 8.30 ಕ್ಕೆ ನಡೆಯಲಿದೆ.ಜ.17 ರಂದು ಮದನೀಯಂ ಮಜ್ಲಿಸ್,ಜ18 ಶನಿವಾರ ರಾತ್ರಿ ನೂರೆ ಅಜ್ಮೀರ್ ಮಜ್ಲಿಸ್, ಜ19 ರಂದು ಮಧ್ಯಾಹ್ನ ಮುಹಮ್ಮದ್ ರಾಫಿ ಹಿಮಮಿ ಕಾಮಿಲ್ ಸಖಾಫಿ ನೇತೃತ್ವದಲ್ಲಿ ಮೌಲೂದು ಪಾರಾಯಣ ಸಂಜೆ 5.30 ಗಂಟೆಗೆ ಸೌಹಾರ್ದ ಸಂಗಮ ,ಅದೇ ದಿನ ರಾತ್ರಿ ಸಯ್ಯಿದ್ ಜಲಾಲುದ್ದೀನ್ ಅಲ್ ಬುಖಾರಿ ತಂಙಳ್ ಅವರ ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮ ದ ಕೊನೆಯ ದಿನ ಜ.19 ಭಾನುವಾರ ಸಂಜೆ 5 ಗಂಟೆಯಿಂದ 7.30ರ ವರೆಗೆ ಮಹಿಳೆಯರಿಗೆ, ರಾತ್ರಿ ಪುರುಷರಿಗೆ ತಬುರ್ರುಕ್ ವಿತರಣೆ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿ ಗೋಷ್ಠಿ ಯಲ್ಲಿ ಬೆಳ್ಮ ಜುಮಾ ಮಸೀದಿ ಅಧ್ಯಕ್ಷ ಮುಹಮ್ಮದ್ ಹನೀಫ್, ಖತೀಬ್ ಮುಹಮ್ಮದ್ ರಾಫಿ ಹಿಮಮಿ ಕಾಮಿಲ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರವೂಫ್, ಎಂ.ಎ.ಅಬ್ದುಲ್ಲ ರೆಂಜಾಡಿ ಉಪಸ್ಥಿತರಿದ್ದರು.