ಅಮುಕ್ತ್‌ನ 37ನೇ ವಾರ್ಷಿಕ ಮಹಾ ಸಭೆ: ನೂತನ ಅಧ್ಯಕ್ಷರಾಗಿ ಡಾ. ಎಸ್.ಎ. ಮಂಜುನಾಥ್ ಆಯ್ಕೆ

Update: 2025-01-13 09:02 GMT

ಮಂಗಳೂರು, ಜ.13: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕರ ಸಂಘ (ಅಮುಕ್ತ್ ) ಇದರ 37ನೇ ವಾರ್ಷಿಕ ಮಹಾ ಸಭೆ ಮತ್ತು ವಾರ್ಷಿಕ ಸಮ್ಮೇಳನ ರವಿವಾರ ದಿ ಸ್ಕೂಲ್ ಆಫ್ ರೋಶನಿ ನಿಲಯದಲ್ಲಿ ನಡೆಯಿತು.

ವಿಧಾನ ಪರಿಷತ್ ಸದಸ್ಯ ಐವಾನ್ ಡಿ ಸೋಜ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಶೈಕ್ಷಣಿಕ ಕ್ಷೇತ್ರದ ಸ್ಥಿತಿಗತಿಗಳ ಬಗ್ಗೆ ಚರ್ಚಿಸಿದರು. ಶಿಕ್ಷಕರ ವೃತ್ತಿಪರ ಅಭಿವೃದ್ಧಿ ಮತ್ತು ವಿದ್ಯಾರ್ಥಿಗಳ ಸಾಧನಗಳಿಗೆ ಅಮುಕ್ತ್ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು.

ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಶಿಕ್ಷಕರ ಸಂಘ (ಅಮುಕ್ತ್ ) ಪೂರ್ವಾಧ್ಯಕ್ಷರಾದ ಪ್ರೊ ಜೋಸ್ಲಿನ್ ಟಿ ಲೋಬೊ ಮತ್ತು ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸರ್ವಿಸಸ್‌ನ ಕಾರ್ಯದರ್ಶಿ ಪ್ರೊ.ಈವ್ಲೀನ್ ಬೆನಿಸ್ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ನಿವೃತ್ತ ಶಿಕ್ಷಕರನ್ನು ಹಾಗೂ ಹೊಸದಾಗಿ ಪಿಎಚ್‌ಡಿ ಪಡೆದವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2025-2027 ಅವಧಿಗೆ ಹೊಸ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಐಕಳದ ಪೊಂಪೈ ಕಾಲೇಜಿನ ಡಾ. ಎಸ್‌ಎ ಮಂಜುನಾಥ್ ನೂತನ ಅಧ್ಯಕ್ಷರಾಗಿ ಮತ್ತು ಕೆನರಾ ಕಾಲೇಜು ಮಂಗಳೂರಿನ ದೇಜಮ್ಮ ಎ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ಡಾ. ವಿನಾಯಕ ಕೆ. ಎಸ್ ಕೋಶಾಧಿಕಾರಿಯಾಗಿ ಆಯ್ಕೆ ಯಾದರು.

ಉಪಾಧ್ಯಕ್ಷರಾಗಿ ಮುಲ್ಕಿ ವಿಜಯಾ ಕಾಲೇಜಿನ ಡಾ. ಶೈಲಜಾ ವೈ.ವಿ ಹಾಗೂ ಮಂಗಳೂರು ಸೈಂಟ್ ಆಗ್ನೇಸ್ ಕಾಲೇಜಿನ ಡಾ. ಮೀರಾ ಆಯ್ಕೆಯಾದರು. ಮಡಂತ್ಯಾರು ಸೇಕ್ರೇಡ್ ಹಾರ್ಟ್ ಕಾಲೇಜಿನ ಡಾ. ಪ್ರಕಾಶ್ ಡಿಸೋಜ ಮತ್ತು ಉಜಿರೆ ಎಸ್‌ಡಿಎಂ ಕಾಲೇಜಿನ ಡಾ. ಸೌಮ್ಯ ಬಿ.ಪಿ ಸಹಾಯಕ ಕಾರ್ಯದರ್ಶಿಗಳಾಗಿ ಆಯ್ಕೆಯಾದರು.

ಅಮುಕ್ತ್ ಅಧ್ಯಕ್ಷ ಪ್ರೊ.ಗಣೇಶ್ ಪೈ ಸ್ವಾಗತಿಸಿದರು ಹಾಗೂ ಆಮುಕ್ತ್ ಟ್ರಸ್ಟ್‌ನ ನಿರ್ವಾಹಕ ಟ್ರಸ್ಟಿ ಡಾ. ಪುರುಷೋತ್ತಮ ಕೆ. ವಿ ಅತಿಥಿಗಳನ್ನು ಪರಿಚಯಿಸಿದರು, ಪ್ರಧಾನ ಕಾರ್ಯದರ್ಶಿಪ್ರೊ. ಸೆಸಿಲಿಯಾ ಎಫ್. ಗೊವೆಸ್ ವಂದಿಸಿದರು.


 



Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News