ಬೆಳ್ತಂಗಡಿ: ತೋಟದ ಕೆರೆಗೆ ಬಿದ್ದು ಮಗು ಮೃತ್ಯು
Update: 2024-01-22 09:08 GMT
ಬೆಳ್ತಂಗಡಿ, ಜ.22: ಮನೆ ಸಮೀಪದ ತೋಟದಲ್ಲಿರುವ ಕೆರೆಗೆ ಬಿದ್ದು ಒಂದು ವರ್ಷ 11 ತಿಂಗಳ ಮಗುವೊಂದು ಮೃತಪಟ್ಟ ಘಟನೆ ತಾಲೂಕಿನ ನಡ ಗ್ರಾಮದ ಕನ್ನಾಜೆ ಎಂಬಲ್ಲಿ ಸೋಮವಾರ ನಡೆದಿದೆ.
ನಡ ಗ್ರಾಮದ ಕನ್ನಾಜೆ ನಿವಾಸಿ ರೋಷನ್ ಡಿಸೋಜ ಮತ್ತು ಉಷಾ ಡಿಸೋಜ ದಂಪತಿಯ ಪುತ್ರ ರೇಯನ್ ಡಿಸೋಜ ಮೃತ ಮಗು.
ಮಗು ಕೆರೆಗೆ ಬಿದ್ದಿರುವುದನ್ನು ಗಮನಿಸಿದ ಮನೆಯವರು ತಕ್ಷಣ ಸ್ಥಳೀಯರ ಸಹಕಾರದಲ್ಲಿ ಮಗುವನ್ನು ಮೇಲೆತ್ತಿ ಲಾಯಿಲ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮಗು ಕೊನೆಯುಸಿರೆಳೆದಿದೆ.
ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.