ಮಾಣಿ ಬಾಲವಿಕಾಸ ದಲ್ಲಿ ಬದುಕಿನ ಕಲೆಯ ಪಯಣ 'ಭಾವಯಾನ' ಕಾರ್ಯಕ್ರಮ
ಬಂಟ್ವಾಳ : ಮಾಣಿ - ಪೆರಾಜೆಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ವತಿಯಿಂದ ಪೆ. 19 ರಿಂದ 23 ರ ತನಕ ಹರ್ಯಾಣದ ಘಟಪುರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸಲಿರುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ, ಶುಭ ಹಾರೈಕೆಯ ಬದುಕಿನ ಕಲೆಯ ಪಯಣ 'ಭಾವಯಾನ' ಕಾರ್ಯಕ್ರಮ ಬಾಲವಿಕಾಸ ಸಭಾ ಭವನದ ದಿ. ಪಾಳ್ಯ ಅನಂತರಾಮ ರೈ ವೇದಿಕೆಯಲ್ಲಿ ಶುಕ್ರವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಣಿ ಬಾಲವಿಕಾಸ ಟ್ರಸ್ಟ್ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ಅದ್ಯಕ್ಷ ಜೆ. ಪ್ರಹ್ಲಾದ್ ಶೆಟ್ಟಿ ಮಾತನಾಡಿ ರಾಷ್ಟ್ರ ಮಟ್ಟದಲ್ಲಿ ನಡೆಯುವ ಭಾವೈಕ್ಯತಾ ಶಿಬಿರದಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಇಡೀ ಕರ್ನಾಟಕದ ಜನತೆಯ ಭಾವನೆಗಳು, ಇಲ್ಲಿನ ಜನತೆಯ ಬದುಕು, ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಲಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ. ಮಾತನಾಡಿ ಹರ್ಯಾಣದಲ್ಲಿ ನಡೆಯುತ್ತಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಕರ್ನಾಟಕದಿಂದ ಒಟ್ಟು 18 ವಿದ್ಯಾರ್ಥಿಗಳ ಪೈಕಿ ಮಾಣಿ ಬಾಲವಿಕಾಸ ಶಾಲೆಯಿಂದಲೇ 18 ಮಂದಿ ಭಾಗವಹಿಸುತ್ತಿರುವುದು ಶ್ಲಾಘನೀಯ ಎಂದ ಅವರು ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶುಭ ಹಾರೈಸಿದರು.
ಅತಿಥಿಗಳಾಗಿ ಭಾಗವಹಿಸಿದ್ದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ಉಪಾಧ್ಯಕ್ಷ ಕೆ.ಬಾಲಕೃಷ್ಣ ಆಳ್ವ, ಕಾರ್ಯದರ್ಶಿ ಯು.ಶರಣಪ್ಪ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ.ಶೆಟ್ಟಿ, ಬಾಲವಿಕಾಸ ಟ್ರಸ್ಟ್ ಕಾರ್ಯದರ್ಶಿ ಮಹೇಶ್ ಶೆಟ್ಟಿ, ವಿದ್ಯಾರ್ಥಿ ರಕ್ಷಕ ತೋಟ ಕೃಷ್ಣಪ್ಪ ಪೂಜಾರಿ, ವಿದ್ಯಾರ್ಥಿ ಅಜ್ಮಲ್ ಮಾತನಾಡಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.
ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಭಾಗವಹಿಸುತ್ತಿರುವ ಗೈಡ್ ಕ್ಯಾಪ್ಟನ್ ಸುಪ್ರಿಯಾ ಡಿ, ಲೇಡಿ ಸ್ಕೌಟ್ ಮಾಸ್ಟರ್ ಸಪ್ನಾ ಪ್ರಸನ್ನ, ಸ್ಕೌಟ್ಸ್ ವಿದ್ಯಾರ್ಥಿಗಳಾದ ವರುಣ್, ವರ್ಷಿತ್ ಬಿ.ಎಂ, ಆಶ್ರಯ್ ಎಲ್, ಅಬ್ದುಲ್ ಮಾಹಿಝ್, ದಿಗಂತ್ ಎಸ್, ಸೌರಭ್ ಪ್ರಭು, ಮನ್ವಿತ್ ಕುಲಾಲ್, ದರ್ಶಿಲ್ ಗೈಡ್ಸ್ ವಿದ್ಯಾರ್ಥಿನಿಯರಾದ ಸಾಕ್ಷಿ, ತನ್ವಿ ಎನ್ ಶೆಟ್ಟಿ, ಚಿನ್ಮಯಿ, ಗೌತಮಿ ಪಿ, ರಿಷಿಕಾ ರೈ, ಸಿಂಚನಾಶ್ರೀ ಶೆಟ್ಟಿ, ಸಿಂಚನ, ದಿಶಾ ಎಂ, ಸುಹಾನಿ ಎಸ್ ಶೆಟ್ಟಿ, ನಿವ್ಯಾ ರೈ ಅವರನ್ನು ಅಭಿನಂದಿಸಿ ಬೀಳ್ಕೊಡಲಾಯಿತು.
ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ಪ್ರಸ್ತಾವನೆಗೈದು, ಸ್ವಾಗತಿಸಿದರು. ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ವಿ.ಶೆಟ್ಟಿ ವಂದಿಸಿದರು. ಶಿಕ್ಷಕಿಯರಾದ ಅಶ್ವಿನಿ ಪಿ.ಆರ್ ಹಾಗೂ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಬುಲ್ ಬುಲ್ ಫ್ಲಾಕ್ ಲೀಡರ್ ಯಶೋಧಾ. ಕೆ, ಗೈಡ್ಸ್ ಕ್ಯಾಪ್ಟನ್ ಲೀಲಾ ಸಹಕರಿಸಿದರು.