BIT ಎನ್‌ಎಸ್‌ಎಸ್ ಘಟಕದಿಂದ ಬೋಳಿಯಾರ್ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ

Update: 2024-11-27 17:26 GMT

ಮಂಗಳೂರು : BIT ಯ NSS ಘಟಕವು ಬೋಳಿಯಾರ್ ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಬೃಹತ್ ಸ್ವಚ್ಛತಾ ಅಭಿಯಾನದಡಿ ಬೋಳಿಯಾರ್ ಗ್ರಾಮದಲ್ಲಿ ನ.26ರಂದು ಮಂಗಳವಾರ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿತ್ತು.

ಕಾರ್ಯಕ್ರಮವನ್ನು ಬೋಳಿಯಾರ್ ಗ್ರಾ.ಪಂ.ಅಧ್ಯಕ್ಷರಾದ ಅಬ್ದುಲ್ ಶಕೂರ್ ಅವರು ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಬೋಳಿಯಾರ್ ಗ್ರಾ.ಪಂ.ಪಿಡಿಒ ಸುಧಾರಾಣಿ ದೊಡ್ಡಮನಿ ಅವರು ಭಾರತೀಯ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಚಾಲನೆ ನೀಡಿದರು. ಪಂಚಾಯತ್ ಕಾರ್ಯದರ್ಶಿ ಚಿತ್ರಾಕ್ಷಿ, BIT ಯ ಪ್ರಾಂಶುಪಾಲರಾದ ಡಾ.ಎಸ್.ಐ. ಮಂಜುರ್ ಬಾಷಾ ಉಪಸ್ಥಿತರಿದ್ದರು.

ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಮೊಹಮ್ಮದ್ ಕಫೀಲ್ ದೆಲ್ವಿ ಅವರು ಸ್ವಯಂಸೇವಕರಿಗೆ ತ್ಯಾಜ್ಯಗಳನ್ನು ವಿಂಗಡಿಸುವ ಕುರಿತು ಮಾರ್ಗದರ್ಶನ ನೀಡಿದರು. ಎನ್ಎಸ್ಎಸ್ ಸ್ವಯಂಸೇವಕರು ಪಂಚಾಯತ್ ರಸ್ತೆಗಳು, ಸಮುದಾಯ ಪ್ರದೇಶಗಳು, ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸುವಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಗ್ರಾಮದ ಬೀದಿಗಳು, ದೇವಸ್ಥಾನಗಳು, ಆಟದ ಮೈದಾನಗಳು ಮತ್ತು ಖಾಲಿ ಸ್ಥಳಗಳಲ್ಲಿದ್ದ ಕಸವನ್ನು ತೆರವುಗೊಳಿಸಿದರು.

ಸ್ವಚ್ಛ ಮತ್ತು ಆರೋಗ್ಯಕರ ಪರಿಸರವನ್ನು ಕಾಪಾಡುವ ಬಗ್ಗೆ ಕಾನೂನು ಅರಿವನ್ನು ಪಸರಿಸುವ ಗುರಿಯನ್ನು ಹೊಂದಿದ್ದ ಕಾರ್ಯಕ್ರಮವು ಪರಿಸರವನ್ನು ಉಳಿಸಿ ಬೆಳೆಸುವ ಮೂಲಭೂತ ಕರ್ತವ್ಯವನ್ನು ಒತ್ತಿ ಹೇಳಿತು.

ಕಾರ್ಯಕ್ರಮಕ್ಕೆ ಬೋಳಿಯಾರ್ ಗ್ರಾಮ ಪಂಚಾಯತ್, ಎಸ್‌ಬಿಐ ಫೌಂಡೇಶನ್, ಹಸಿರು ದಳ ಮಂಗಳೂರು ಮತ್ತು ಸಂಜೀವಿನಿ ಒಕ್ಕೂಟ ಎನ್‌ಜಿಒಗಳು ಮತ್ತು ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಪ್ರಮುಖರು ಬೆಂಬಲ ನೀಡಿದರು.








 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News