ಅಲ್ ಖಸ್ವಾ ಫ್ರೆಂಡ್ಸ್ ಗ್ರೂಪ್‌ನಿಂದ ರಕ್ತದಾನ ಶಿಬಿರ

Update: 2024-08-26 16:55 GMT

ಮಂಗಳೂರು, ಆ.26: ಅಲ್ ಖಸ್ವಾ ಫ್ರೆಂಡ್ಸ್ ಗ್ರೂಪ್ ಮಂಗಳೂರು ವತಿಯಿಂದ ಸಮಾಜ ಸೇವಕರಾಗಿದ್ದ ಮರ್ಹೂಂ ಸಲೀಂ ಚಲ್ಲಿ ಬಂದರ್ ಮತ್ತು ಅಮೀರ್ ಕಂಚಿನಡ್ಕ ಅವರ ಸ್ಮರಣಾರ್ಥ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕಿನ ಸಹಯೋಗದಲ್ಲಿ ರಕ್ತದಾನ ಶಿಬಿರ ನಗರದ ರಾವ್ ಆ್ಯಂಡ್ ರಾವ್ ವೃತ್ತದ ಬಳಿಯಿರುವ ಸಹಕಾರಿ ಸದನದ ಕಟ್ಟಡದಲ್ಲಿ ನಡೆಯಿತು.

ಕುದ್ರೋಳಿ ನಡುಪಳ್ಳಿ ಜಮ್ಮಾ ಮಸೀದಿಯ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ ದುಆ ನೆರವೇರಿಸಿದರು. ಡಿವೈಎಫ್‌ಐ ಮಾಜಿ ರಾಜ್ಯಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್, ಕಾರ್ಪೊರೇಟರ್‌ಗಳದ ಅಬ್ದುಲ್ಲತೀಫ್ ಕಂದಕ್, ಶಂಶುದ್ದೀನ್ ಕುದ್ರೋಳಿ ಮತ್ತು ಶಂಸುದ್ದೀನ್ ಬಂದರ್, ಡಾ. ಕೆ. ಮೋಹನ್ ಪೈ ಮಾತನಾಡಿದರು.

ಸಂಸ್ಥೆಯ ಸಂಚಾಲಕ ನಝೀರ್ ಮುಹಮ್ಮದ್ ಕುದ್ರೋಳಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸಯ್ಯದ್ ಮುಷಾದಿಕ್, ಸಿರಾಜುದ್ದೀನ್, ಎ.ರಿಫಾಯ್, ನಾಸಿರ್, ಎಮ್ಮೆಕೆರೆ ಸಲಾಂ, ಅನೀಸ್ ಬಂದರ್, ಡಿವೈಎಫ್‌ಐ ದ.ಕ.ಜಿಲ್ಲಾಧ್ತಕ್ಷ ಬಿ.ಕೆ. ಇಮ್ತಿಯಾಝ್, ಯುವ ಜೆಡಿಎಸ್ ಮಂಗಳೂರು ದಕ್ಷಿಣ ಕ್ಷೇತ್ರಾಧ್ಯಕ್ಷ ಅಬ್ದುಲ್ ಸತ್ತಾರ್, ಪಾಂಡೇಶ್ವರ ಠಾಣೆಯ ಎಸ್ಸೈ ಮನೋಹರ್, ಬಂದರು ಠಾಣೆಯ ಎಸ್ಸೈ ಮಂಜುಳಾ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡ ನಿಝಾಮ್ ಕಂಚಿನಡ್ಕ, ಯಾಸೀರ್ ಬೈಕಂಪಾಡಿ,ಯೂಸುಫ್ ಕೆಸಿ ರೋಡ್, ಅಶ್ರಫ್ ಆಸ್ರ, ಇಮ್ತಿಯಾಝ್, ಸಮದ್ ಕುದ್ರೋಳಿ ಉಪಸ್ಥಿತರಿದ್ದರು.

ತುರ್ತು ಸಂದರ್ಭ ಒಂದೇ ವರ್ಷದಲ್ಲಿ ಮೂರು ಬಾರಿ ರಕ್ತದಾನ ಮಾಡಿದ 17ರ ಹರೆಯದ ಇನಾಸ್ ಬಿ.ಕೆ. ಹಾಗೂ ಸಮಾಜ ಸೇವಕ ಹನೀಫ್ ಖಾಜಿ, ಎಸ್ಸೈ ಮನೋಹರ್ ಅವರನ್ನು ಸನ್ಮಾನಿಸಲಾಯಿತು.

ಮೈಕಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಅಶ್ರಫ್ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News