ಬಿಎನ್‌ಐ ಮಂಗಳೂರು ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಫೋ ಪ್ರದರ್ಶನಕ್ಕೆ ಚಾಲನೆ

Update: 2024-09-20 13:45 GMT

ಮಂಗಳೂರು: ಬಿಎನ್‌ಐ ಮಂಗಳೂರು ಮತ್ತು ಉಡುಪಿ ವತಿಯಿಂದ ಬಿಗ್ ಬ್ರ್ಯಾಂಡ್ಸ್ ಎಕ್ಸ್‌ಫೋ- 2024 ಪ್ರದರ್ಶನ ಶುಕ್ರವಾರ ಮಂಗಳೂರಿನ ಎಂ.ಜಿ. ರಸ್ತೆಯ ಡಾ. ಟಿ.ಎಂ.ಎ ಪೈ ಕನ್ವೆನ್ಷನ್ ಸೆಂಟರ್‌ನಲ್ಲಿ ಶುಕ್ರವಾರ  ಆರಂಭಗೊಂಡಿತು.

ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ಬ್ರ್ಯಾಂಡ್ಸ್ ಎಕ್ಸ್‌ಫೋಗೆ ಚಾಲನೆ ನೀಡಿದರು.

ಒಂದು ಪ್ರದೇಶ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ದಿಯಾಗಲು ಆರ್ಥಿಕ ಸಂಚಲನವೇ ಮೂಲ ಕಾರಣವಾಗಿದೆ. ಎಲ್ಲರನ್ನು ಒಂದೆಡೆ ಸೇರಿಸಿಕೊಂಡು ಬಿಎನ್‌ಐ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ ನಡೆಸುತ್ತಿರುವುದು ಶ್ಲಾಘನೀಯ ಎಂದು ಯು.ಟಿ. ಖಾದರ್ ಹೇಳಿದರು.

ಇದೇ ಸಂದರ್ಭ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರು ಎಕ್ಸ್‌ಪೋ ಡೈರಕ್ಟರಿ ಯನ್ನು ಅನಾವರಣಗೊಳಿಸಿದರು. ಸತತ ಮೂರು ವರ್ಷಗಳಿಂದ ಮಂಗಳೂರಿನಲ್ಲಿ ಆಯೋಜನೆಗೊಳ್ಳುತ್ತಿರುವ ಬಿಗ್ ಬ್ರ್ಯಾಂಡ್ ಎಕ್ಸ್‌ಪೋ ಯಶಸ್ವಿಯಾಗಿದ್ದು, ಉದ್ಯಮಿಗಳಿಗೆ, ಗ್ರಾಹಕರಿಗೆ ಹಚ್ಚಿನ ಲಾಭವಾಗಿದೆ ಎಂದರು

ಬಿಎನ್‌ಐ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಗಣೇಶ್.ಎನ್.ಶರ್ಮ ಅವರ ಪತ್ನಿ ಪ್ರೀತಿ ಶರ್ಮ ಉಪಸ್ಥಿತರಿದ್ದರು. ಬಿಎನ್‌ಐ ಅಧ್ಯಕ್ಷ ಮೋಹನ್‌ರಾಜ್ ಸ್ವಾಗತಿಸಿದರು.

ಪ್ರಮುಖರಾದ ಮಹೇಶ್ ಶೆಟ್ಟಿ, ಮೋಹನ್ ಶೆಟ್ಟಿ, ಸುನಿಲ್ ದತ್ತ್ ಪೈ, ಪ್ರಜ್ವಲ್ ಶೆಟ್ಟಿ, ಡಾ.ಸಚಿನ್ ನಡ್ಕಉಪಸ್ಥಿತರಿದ್ದರು.

*ಮೂರು ದಿನಗಳ ಪ್ರದರ್ಶನ

ಮೂರನೇ ವರ್ಷದ ಈ ಎಕ್ಸ್‌ಪೋದಲ್ಲಿ ಸಂಸ್ಥೆಯ 120 ಸದಸ್ಯರು ತಮ್ಮ ಉದ್ದಿಮೆಗಳ ಪ್ರದರ್ಶನ ನಡೆಸುತ್ತಿದ್ದು, ಸೆ.23ರವರೆಗೆ ಬೆಳಗ್ಗೆ 10ರಿಂದ ರಾತ್ರಿ 8ರ ವರೆಗೆ ನಡೆಯಲಿದೆ. ಕಟ್ಟಡ ಸಾಮಗ್ರಿ, ವಿಮೆ, ಆಭರಣ, ಆಟೋಮೊಬೈಲ್, ಗಾರ್ಮೆಂಟ್ಸ್, ಲೈಟಿಂಗ್ ಸೊಲ್ಯೂಷನ್, ಇನ್ಶೂರೆನ್ಸ್, ಗಾರ್ಮೆಂಟ್ಸ್, ಐ.ಟಿ. ಪ್ರಾಡಕ್ಟ್, ಸಾಫ್ಟ್‌ವೇರ್, ಆಫೀಸ್ ಆ್ಯಂಡ್ ಹೋಂ ಫರ್ನಿಚರ್ಸ್‌, ಫುಡ್ ಪ್ರಾಡಕ್ಟ್ ಮೊದಲಾದ 120ಕ್ಕೂ ಅಧಿಕ ಉದ್ಯಮಗಳ ವ್ಯಾಪಕ ಶ್ರೇಣಿಯ ಉತ್ಪನ್ನಗಳ ಪ್ರದರ್ಶನವಿದೆ. ಮಂಗಳೂರು ನಗರ ಮಾತ್ರವಲ್ಲದೆ ದಕ್ಷಿಣ ಕನ್ನಡ, ಉಡುಪಿ, ಕೇರಳ, ಕೊಡಗು ಮೊದಲಾದ ಪ್ರದೇಶಗಳ ಜನ ಉತ್ತಮ ಗುಣಮಟ್ಟದ ಉತ್ಪನ್ನ, ಸೇವೆಗಳನ್ನು ಪಡೆಯಲು ಈ ಪ್ರದರ್ಶನ ಸಹಕಾರಿಯಾಗಲಿದೆ ಎಂದು ಬಿಎನ್‌ಐ ಅಧ್ಯಕ್ಷ ಮೋಹನ್‌ರಾಜ್ ತಿಳಿಸಿದ್ದಾರೆ.






















 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News