ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಎ.18ರಂದು ಬೃಹತ್ ಪ್ರತಿಭಟನೆ: ಎ.14 ರಂದು ಎಸ್ ವೈಎಸ್ ನಿಂದ ಪ್ರಚಾರ ಸಭೆ

Update: 2025-04-13 11:58 IST
ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಎ.18ರಂದು ಬೃಹತ್ ಪ್ರತಿಭಟನೆ: ಎ.14 ರಂದು ಎಸ್ ವೈಎಸ್  ನಿಂದ ಪ್ರಚಾರ ಸಭೆ
  • whatsapp icon

ಮಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ದ.ಕ. ಉಲಮಾ ಕೋ ಆರ್ಡಿನೇಶನ್ ನೇತೃತ್ವದಲ್ಲಿ ಎ.18ರಂದು ಅಡ್ಯಾರ್ ಕಣ್ಣೂರಿನ ಶಾ ಗಾರ್ಡನ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇದರ ಪ್ರಚಾರಾರ್ಥ ಎ.14ರಂದು ರಾತ್ರಿ 7 ಗಂಟೆಗೆ ಏಕಕಾಲದಲ್ಲಿ ಎಸ್.ವೈ.ಎಸ್. ದಕ್ಷಿಣ ಕನ್ನಡ ಜಿಲ್ಲಾ (ವೆಸ್ಟ್) ವ್ಯಾಪ್ತಿಯ 33 ಸರ್ಕಲ್ ಗಳಾದ ಸಜೀಪ, ಬೋಳಿಯಾರ್, ಮಂಗಳೂರು, ಉಳ್ಳಾಲ, ಸುರತ್ಕಲ್, ಕೃಷ್ಣಾಪುರ, ತಲಪಾಡಿ, ಕೋಟೆಕಾರ್, ಬಂಟ್ವಾಳ, ಪಾಣೆಮಂಗಳೂರು, ಫರಂಗಿಪೇಟೆ, ಕಣ್ಣೂರು, ಕೊಣಾಜೆ, ಹರೇಕಳ, ಮೂಡುಬಿದಿರೆ, ಕಾವೂರು, ಮುಲ್ಕಿ, ಕಾಟಿಪಳ್ಳ, ಬೆಳ್ಮ, ನಾಟೆಕಲ್, ಮುಡಿಪು, ಬಾಳೆಪುಣಿ, ತೌಡುಗೋಳಿ, ಮೋಂಟುಗೋಳಿ, ಕಿನ್ಯಾ, ಮಂಜನಾಡಿ, ಸುರಿಬೈಲ್, ಮಂಚಿ, ಅಮ್ಮುಂಜೆ, ಕೈಕಂಬ, ಸಾಲೆತ್ತೂರು, ಬೋಳಂತೂರು ಹಾಗೂ ಬಜ್ಪೆಯಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ವೈ.ಎಸ್. ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮರಿಕ್ಕಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News