ದ.ಕ.ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರಾಗಿ ಡಾ. ಅಕ್ಷತಾ ಆದರ್ಶ್ ನೇಮಕ

Update: 2024-09-11 16:13 GMT

ಮಂಗಳೂರು: ದಕ್ಷಿಣ ಕನ್ನಡ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರನ್ನಾಗಿ ಮೂಡಬಿದ್ರೆಯ ವಕೀಲರಾದ ಡಾ. ಅಕ್ಷತಾ ಆದರ್ಶ್ ನೇಮಕಗೊಂಡಿದ್ದಾರೆ.

ಸಮಿತಿಗೆ ಅಧ್ಯಕ್ಷರು ಹಾಗೂ ನಾಲ್ವರು ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ಸರಕಾರ ನೇಮಕ ಮಾಡಿದೆ.

ಸಮಿತಿಯ ಸದಸ್ಯರಾಗಿ ಅಬೂಬಕರ್ ಜಿ.ಎನ್ ಮಂಗಳೂರು, ಹರಿಣಿ ಬಿಕರ್ನಕಟ್ಟೆ, ಕಿಶೋರ್ ಕುಂದರ್ ಎಕ್ಕೂರ್, ಹರೀಶ ಎಂ. ನಾಗರಿ ಇವರನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಆರ್.ಲತಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News