ಡಿಸಿಇಟಿ ಪರೀಕ್ಷೆ ಹಿನ್ನೆಲೆ: ಸೆ.144 ಜಾರಿ

Update: 2023-09-08 15:41 GMT

ಮಂಗಳೂರು.ಸೆ.8: ನಗರದ ಕೊಡಿಯಾಲ್‌ಬೈಲ್‌ನ ಎಂ.ಜಿ ರಸ್ತೆಯಲ್ಲಿರುವ ಕೆನರಾ ಪದವಿ ಪೂರ್ವ ಕಾಲೇಜು ಹಾಗೂ ಬಲ್ಮಠದಲ್ಲಿರುವ ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ 2023ನೇ ಸಾಲಿನ ಡಿಸಿಇಟಿ ಪರೀಕ್ಷೆಯು ನಡೆಯಲಿದೆ.

ಈ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ಅಥವಾ ಅಹಿತಕರ ಘಟನೆಗಳು ನಡೆಯದಂತೆ ತಡೆಯುವ ಸಲುವಾಗಿ ಸೆ.9ರ ಮಧ್ಯಾಹ್ನ 1ರಿಂದ ಸಂಜೆ 6ರವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ.ವ್ಯಾಪ್ತಿಯ ಪ್ರದೇಶದಲ್ಲಿ ಸೆ.144 ಜಾರಿಗೊಳಿಸಲಾಗಿದೆ ಕಾನೂನು ಮತ್ತು ಸುವ್ಯವಸ್ಥೆ ಉಪಾಯುಕ್ತ ಹಾಗೂ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿ ಸಿದ್ಧಾರ್ಥ್ ಗೋಯಲ್ ಆದೇಶಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News