ದೇರಳಕಟ್ಟೆ: ಮೆಕ್ಯಾನಿಕಲ್ ವೆಂಟಿಲೇಷನ್, ಫಿಸಿಯೋಥೆರಪಿ ಕಾರ್ಯಾಗಾರ
ಕೊಣಾಜೆ: ಮೆಕ್ಯಾನಿಕಲ್ ವೆಂಟಿಲೇಶನ್ ಮತ್ತು ಫಿಸಿಯೋಥೆರಪಿ ಎಂಬ ವಿಷಯದ ಕುರಿತು ಕಾರ್ಯಾಗಾರವು ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ನಡೆಯಿತು.
ಕೆ.ಎಸ್. ಹೆಗ್ಡೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಸುಮಲತಾ ಶೆಟ್ಟಿ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕೆಎಂಸಿ ಮಂಗಳೂರಿನ ಕ್ರಿಟಿಕಲ್ ಕೇರ್ ವಿಭಾಗದ ಡಾ.ದತ್ತಾತ್ರೇಯ ಪ್ರಭು ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ.ಸ್ಪೂರ್ತಿ ಹೊಳ್ಳ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಕಾರ್ಯನಿರ್ವಹಿಸಿದರು.
ಕೆಎಂಸಿ ಮಣಿಪಾಲದ ಕಾರ್ಡಿಯೋ-ಪಲ್ಮನರಿ ಫಿಸಿಯೋಥೆರಪಿ ವಿಭಾಗದ ಡಾ.ಅನುಪ್ ಭಟ್ ಅವರು ಮೆಕ್ಯಾನಿಕಲ್ ವೆಂಟಿಲೇಷನ್ ಜೊತೆಗೆ ಫಿಸಿಯೋಥೆರಪಿ ತಂತ್ರಗಳನ್ನು ಸಂಯೋಜಿಸುವ ಕುರಿತು ಮಾಹಿತಿ ನೀಡಿದರು.
ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಧನೇಶ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮದ ಸಂಚಾಲಕಿ ಐಶ್ವರ್ಯ ನಾಯರ್ ವಂದಿಸಿದರು.
ಕಾರ್ಯಾಗಾರದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಮತ್ತು ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.