ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಐವನ್ ಡಿಸೋಜರ ಕಚೇರಿ ಪ್ರಾರಂಭ
ಮಂಗಳೂರು: ಮಹಾನಗರ ಪಾಲಿಕೆಯ ನೆಲಮಹಡಿಯಲ್ಲಿ ವಿಧಾನ ಪರಿಷತ್ತಿನ ಶಾಸಕ ಐವನ್ ಡಿಸೋಜಾ ಅವರ ಶಾಸಕರ ಕಚೇರಿಯ ಉದ್ಘಾಟನೆಯನ್ನು ಕಟೀಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಕೆ. ಅನಂತ ಪದ್ಮನಾಭ ಅಸ್ರಣ್ಣ, ಕುದ್ರೋಳಿ ನಡುಪಲ್ಲಿ ಮಸೀದಿ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ, ಬಿಜೈ ಚರ್ಚ್ ನ ಪಾ. ಜಾನ್ಸನ್ ಸಿಕ್ವೇರಾ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶ್ರೀ ಕೆ. ಅನಂತ ಪದ್ಮನಾಭ ಆಸ್ರಣ್ಣ, ಐವನ್ ಡಿಸೋಜಾ ಇವರು ಜನಪರ ಕೆಲಸಗಳು ಮತ್ತು ಜನಪರ ಕಾಳಜಿ, ಯಾವುದೇ ಕೆಲಸ ಪ್ರಾರಂಭಿಸಿದರು ಗುರಿ ಮುಟ್ಟಿಸುವಂತ ಜವಾಬ್ದಾರಿ ಕೆಲಸ ಮಾಡುವಂತರು. ಎರಡನೇ ಭಾರಿ ವಿಧಾನ ಪರಿಷತ್ತಿನ ಶಾಸಕರಾಗಿ ಒಳ್ಳೆ ಭವಿಷ್ಯ ನಿರ್ಮಾಣವಾಗಲಿ ಮತ್ತು ಮೊದಲನೇ ಭಾರಿ ಶಾಸಕ ರಾಗಿ ಅವರು ಮಾಡಿದ ಕೆಲಸ, ಸೇವೆ ಅತ್ಯಂತ ಅದ್ಬುತವಾಗಿದ್ಧು ,ಅವರ ಸೇವೆಗೆ ಮತ್ತೊಮ್ಮೆ ವಿಧಾನ ಪರಿಷತ್ತಿನ ಶಾಸಕರಾಗುವಂತೆ ಆಯಿತು. ಮುಂದೆ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಲಿ ಅಂತ ನಾನು ಆಶಿಸುತ್ತೇನೆ ಎಂದು ಈ ಸಂದರ್ಭ ಹೇಳಿದರು. ಖತೀಬ್ ಹಾಗೂ ಧರ್ಮ ಗುರುಗಳು ಮಾತನಾಡಿ ಸಾರ್ವಜನಿಕರಿಗೆ ಸದುಪಯೋಗವಾಲೆಂದು ಹಾರೈಸಿ, ಐವನ್ ರವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಮಾಜಿ ಶಾಸಕ ಜೆ ಆರ್ ಲೋಬೊ, ಮಾಜಿ ಮೂಡ ಅಧ್ಯಕ್ಷರಾದ ಸುರೇಶ್ ಬಲ್ಲಾಳ್ ಶುಭ ಹಾರೈಸಿದರು. ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಹರೀಶ್ ಕುಮಾರ್, ನಗರ ಪಾಲಿಕೆಯ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಭೇಟಿ ನೀಡಿ ಶುಭ ಹಾರೈಸಿದರು.