ಜೆಪ್ಪು ಸೈಂಟ್ ಅಂತೋನಿ ಚಾರಿಟಿ ಸಂಸ್ಥೆಯಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆ
ಮಂಗಳೂರು: ಸೈಂಟ್ ಅಂತೋನಿ ಚಾರಿಟಿಯಲ್ಲಿ ರವಿವಾರ ಅಪೂರ್ವ ವಾತಾವರಣ ನೆಲೆಸಿತ್ತು. ಸಂಸ್ಥೆಯ ನಿವಾಸಿಗಳು, ಧರ್ಮಗುರುಗಳು ಮತ್ತು ಹಿತೈಷಿಗಳು ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಬಿಷಪ್ ಡಾ ಪೀಟರ್ ಪೌಲ್ ಸಲ್ಡಾನ್ಹ ವಹಿಸಿದ್ದರು. ಅವರು ಸಂದೇಶ ನೀಡಿ ಸಮಾಜಕ್ಕೆ ಜೆಪ್ಪು ಸೈಂಟ್ ಅಂತೋನಿ ಚಾರಿಟಿ ಸಂಸ್ಥೆಯ ಸಂಸ್ಥೆಯ ಗಮನಾರ್ಹ ಸೇವೆಯನ್ನು ಶ್ಲಾಘಿಸಿದರು. ಆಶ್ರಮವು ನಿರ್ಗತಿಕರಿಗೆ ಆಶ್ರಯ ನೀಡುವ ಮೂಲಕ ಬೆಳಕು ಮತ್ತು ಭರವಸೆಯ ದಾರಿದೀಪವಾಗಿದೆ ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ , ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಭಾಗವಹಿಸಿ ಶುಭ ಹಾರೈಸಿದರು.
ಫಳ್ನೀರ್ ವಾರ್ಡ್‌ನ ಕಾರ್ಪೊರೇಟರ್ ಜೆಸಿಂತಾ ವಿಜಯ್ ಆಲ್ಫ್ರೇಡ್ ಮತ್ತು ಭರತ್ ಜೆಪ್ಪುವಾರ್ಡ್‌ನ ಕಾರ್ಪೊರೇಟರ್ ಕುಮಾರ್ ಎಸ್, ಫಾ. ಗಿಲ್ಬರ್ಟ್ ಡಿಸೋಜ, ಫಾ. ನೆಲ್ಸನ್ ಪೆರಿಸ್,ಫಾ. ಅನಿಲ್ ಇವಾನ್ ಫೆರ್ನಾಂಡಿಸ್, ರಾಯ್ ಕ್ಯಾಸ್ಟೆಲಿನೊ, ಮಾರ್ಸೆಲ್ ಮೊಂತೇರೊ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳಿಗೆ ಕ್ರಿಸ್ಮಸ್ ಉಡುಗೊರೆಗಳನ್ನು ವಿತರಿಸಲಾಯಿತು. ಕೊಂಕಣಿ ಚಲನಚಿತ್ರ ಕ್ರಿಸ್ತಾಚೆಂ ಜನನ್ (ದಿ ಕ್ರಿಸ್ತನ ಜನನ) ಪ್ರದರ್ಶಿಸಲಾಯಿತು. ಕರೋಲ್ ಗಾಯನ ಪ್ರೇಕ್ಷಕರ ಮನಸೂರೆಗೊಂಡಿತು.
ಸಂಸ್ಥೆಯ ನಿರ್ದೇಶಕ ಫಾ.ಜೆ.ಬಿ.ಕ್ರಾಸ್ತಾ ಅವರು ಸ್ವಾಗತಿಸಿದರು. ಅಲೋಶಿಯಸ್ ಡಿಸೋಜ ಕಾರ್ಯಕ್ರಮ ಸಂಯೋಜಿಸಿದರು. ಫಾ. ಅವಿನಾಶ್ ಪೈಸ್ ವಂದಿಸಿದರು.