ಮಂಗಳೂರು ಧರ್ಮಪ್ರಾಂತ್ಯ: ಡಿ. 29ರಂದು 2025ನೇ ಜುಬಿಲಿ ವರ್ಷಾಚರಣೆ ಉದ್ಘಾಟನೆ

Update: 2024-12-22 14:49 GMT

ಮಂಗಳೂರು, ಡಿ.22: ಏಸು ಕ್ರಿಸ್ತರು ಹುಟ್ಟಿ 2025 ವರ್ಷಗಳಾಗಿದ್ದು, 2025 ವರ್ಷವನ್ನು ಜುಬಿಲಿ ವರ್ಷವನ್ನಾಗಿ ಆಚರಿಸಲಾಗುವುದು. ಜುಬಿಲಿ ವರ್ಷವನ್ನು ಡಿ. 24ರಂದು ವ್ಯಾಟಿಕನ್‌ನಲ್ಲಿ ಪೋಪ್ ಉದ್ಘಾಟಿಸಲಿದ್ದಾರೆ.

ಮಂಗಳೂರು ಧರ್ಮಪ್ರಾಂತ್ಯದಲ್ಲಿ ಜುಬಿಲಿ ವರ್ಷವನ್ನು ಡಿ.29ರಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂ. ಡಾ ಪೀಟರ್ ಪಾವ್ಲ್ ಸಲ್ಡಾನಾ ಚಾಲನೆ ನೀಡಲಿದ್ದಾರೆ.

ಡಿ.29ರಂದು ಬೆಳಗ್ಗೆ 7:30ಕ್ಕೆ ಮಂಗಳೂರಿನ ಸಂತ ಆ್ಯನ್ಸ್ ಕಾನ್ವೆಂಟ್ ಬೊಳಾರ್‌ನ ಚಾಪೆಲ್‌ನಲ್ಲಿ ಪ್ರಾರ್ಥನಾ ವಿಧಿಯೊಂದಿಗೆ ಉದ್ಘಾಟನೆ ನೆರವೇರಲಿದೆ. ಬಳಿಕ ರೊಸಾರಿಯೊ ಕಾಥೆದ್ರಲ್ ಚರ್ಚ್‌ನಲ್ಲಿ 8 ಗಂಟೆಗೆ ಧರ್ಮಾಧ್ಯಕ್ಷರ ನೇತೃತ್ವದಲ್ಲಿ ಬಲಿಪೂಜೆ ನಡೆಯಲಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಫಾ. ಜೋಸೆಫ್ ಮಾರ್ಟಿಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News