ಮೂಡುಬಿದಿರೆ| ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ

Update: 2024-12-22 14:33 GMT

ಮೂಡುಬಿದಿರೆ : ಮಹಿಳೆ ಅಬಲೆಯಲ್ಲ ಸಬಲೆ, ಆಕೆ ಆಥಿ೯ಕ ಸ್ವಾತಂತ್ರ್ಯ ಪಡೆಯಲು, ಉತ್ತಮ ಕುಟುಂಬ ನಿವ೯ಹಣೆಯ ಜವಾಬ್ದಾರಿ ಹೊರಲು ಧ್ಯೈಯ೯ ಮತ್ತು ಸ್ಥೈರ್ಯ ಪಡೆದುಕೊಂಡಿದ್ದರೆ ಅದು ಜ್ಞಾನ ವಿಕಾಸದಂತಹ ಕಾಯ೯ಕ್ರಮಗಳಿಂದ ಎಂದು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್ ಅಭಿಪ್ರಾಯಪಟ್ಟರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮೂಡುಬಿದಿರೆ ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದನ್ವಯ ಕಲ್ಲಬೆಟ್ಟು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ರವಿವಾರ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆ ಸುಜ್ಞಾನದ ಬೆಳಕು. ಆಕೆ ಇಂದು ತನ್ನ ಕುಟುಂಬ,ಮಕ್ಕಳು ಎಂದು ಮನೆಯಲ್ಲಿಯೇ ಕುಳಿತುಕೊಂಡಿಲ್ಲ ಬದಲಾಗಿ ಸಮಾಜ, ದೇಶ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅವರು ಇಂದಿನ ಅವಸರದ ಧಾವಂತದಲ್ಲಿ ಆಹಾರ ಪದ್ಧತಿ, ಜೀವನ ಶೈಲಿಯ ಬದಲಾವಣೆ ಯಿಂದಾಗಿ ಆರೋಗ್ಯ ಹದಗೆಡುತ್ತಿದೆ ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಇತರರಿಂದ ನಿರೀಕ್ಷೆ ಬೇಡ ನಿಮ್ಮ ಮೇಲೆ ನೀವು ನಂಬಿಕೆಯಿಡಿ ಎಂದು ಸಲಹೆ ನೀಡಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಸ್ವಾತಂತ್ರ್ಯಪೂರ್ವ ದಿಲ್ಲಿ ಮಹಿಳೆ ಮನೆಗೆ ಮಾತ್ರ ಸೀಮಿತವಾಗಿದ್ದಳು ಆದರೆ ಇಂದು ಆಕೆಯಲ್ಲಿ ಶಿಸ್ತು, ಶಕ್ತಿ ,ಸ್ವಾಭಿಮಾನ, ಸ್ವಚ್ಛತೆಯ ಅರಿವು ಮೂಡಿದೆ ಇದಕ್ಕೆಲ್ಲಾ ಕಾರಣ ಗ್ರಾಮಾಭಿವೃದ್ಧಿ ಯೋಜನೆ ಎಂದರು.

ಶ್ರೀ ಧವಲಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಮಲ್ಲಿಕಾ ರಾವ್ ಸಂಪನ್ಮೂಲ ವ್ಯಕ್ತಿಯಾಗಿ ವ್ಯಕ್ತಿಯಾಗಿ ಭಾಗವಹಿಸಿ "ಬದಲಾಗುತ್ತಿರುವ ಸನ್ನಿವೇಶದಲ್ಲಿ ಮಹಿಳೆಯ ಪಾತ್ರ " ಎಂಬ ವಿಷಯದ ಕುರಿತು ಮಾತನಾಡಿದರು.

ಪುರಸಭಾ ಅಧ್ಯಕ್ಷೆ ಜಯಶ್ರೀ ಕೇಶವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶ್ರೀ ಕ್ಷೇ. ಧ.ಗ್ರಾ.ಯೋಜನೆ ಬಿ.ಸಿ.ಟ್ರಸ್ಟ್. ರಿ. ದ.ಕ.ಜಿಲ್ಲಾ ನಿದೇ೯ಶಕ ಮಹಾಬಲ ಕುಲಾಲ್, ಪುರಸಭಾ ಸದಸ್ಯ,ಜನಜಾಗೃತಿ ವೇದಿಕೆಯ ಸದಸ್ಯರಾದ ಪ್ರಸಾದ್ ಕುಮಾರ್, ಜೊಸ್ಸಿ ಮಿನೇಜಸ್ ಉಪಸ್ಥಿತರಿದ್ದರು.

ಗ್ರಾಮಾಭಿವ್ರದ್ಧಿ ಯೋಜನೆಯ ಮೂಡುಬಿದಿರೆ ತಾಲೂಕು ಯೋಜನಾಧಿಕಾರಿ ಸುನೀತಾ ನಾಯ್ಕ್ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವಿದ್ಯಾ ಅವರು ಸ್ಪರ್ಧಾ ವಿಜೇತರ ಪಟ್ಟಿ ಹಾಗೂ ಶೇ.100 ಹಾಜರಾತಿ ಪಡೆದವರ ಹೆಸರುಗಳನ್ನು ವಾಚಿಸಿದ್ದು, ಸದಸ್ಯರನ್ನು ಗುರುತಿಸಿ ಗೌರವಿಸಲಾಯಿತು.

ಮೇಲ್ವಿಚಾರಕಿ ಕಾಯ೯ ಕ್ರಮ ನಿರೂಪಿಸಿದರು. ಲೆಕ್ಕಪರಿಶೋಧನೆ ನಾಗೇಶ್ ವಂದಿಸಿದರು. ನಂತರ ತಾಲೂಕಿನ ವಿವಿಧ ಜ್ಞಾನ ವಿಕಾಸ ತಂಡಗಳಿಂದ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಿದ್ದು ಕೊಡಂಗಲ್ಲು ಒಕ್ಕೂಟದ ಮ್ಯೈತ್ರಿ ಜ್ಞಾನ ವಿಕಾಸ ಕೇಂದ್ರವು ಪ್ರಥಮ ಬಹುಮಾನ ಹಾಗೂ ಉತ್ತಮ ಕೇಂದ್ರದಲ್ಲಿ ಗಾಡಿಪಲ್ಕೆಯ ಸಂಕ್ರಾಂತಿ ಜ್ಞಾ.ವಿ.ಕೇಂದ್ರ ಪ್ರಥಮ ಹಾಗೂ ಮೈತ್ರಿ ಜ್ಞಾ.ವಿ.ಕೇಂದ್ರವು ದ್ವಿತೀಯ ಸ್ಥಾನ ನನ್ನು ಪಡೆದುಕೊಂಡಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News