ಸರಕಾರದ ನೇರ ನಗದು ಹಣ ವರ್ಗಾವಣೆ; ಯಾವುದೇ ಗೊಂದಲ ಬೇಡ: ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸ್ಪಷ್ಟನೆ
ಮಂಗಳೂರು : ಸರಕಾರದ ನೇರ ನಗದು ಹಣ ವರ್ಗಾವಣೆ ಯೋಜನೆಯ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಮಂಗಳೂರು ವಿಭಾಗದ ಹಿರಿಯ ಅಂಚೆ ಅಧೀಕ್ಷಕ ಸ್ಪಷ್ಟನೆ ನೀಡಿದ್ದಾರೆ.
ಹಣ ಖಾತೆಗೆ ಜಮೆ ಆಗದಿರುವ ಬಗ್ಗೆ ಫಲಾನುಭವಿಗಳು ವಿಚಾರಣೆಗೆ ಅಂಚೆ ಕಚೇರಿಗಳಿಗೆ ಭೇಟಿ ಕೊಡುತ್ತಿದ್ದಾರೆ. ಗ್ರಾಹಕರ ಅಂಚೆ/ IPPB/ಬ್ಯಾಂಕ್ ಖಾತೆಯು NPCIಯೊಂದಿಗೆ ಜೊಡಣೆಯಾಗಿದ್ದು, ಆ ಖಾತೆಯು ಸಕ್ರಿಯವಾಗಿದ್ದರೆ ಸರಕಾರದ ಯಾವುದೇ ಆಧಾರ ಆಧಾರಿತ ಸೌಲಭ್ಯವು ಖಾತೆಗೆ ಜಮೆಯಾಗುವಲ್ಲಿ ಸಂದೇಹವಿಲ್ಲ. ಗ್ರಾಹಕರ ಖಾತೆಯು NPCIಯೊಂದಿಗೆ ಜೊಡಣೆಯಾಗಿದ್ದೂ ಹಣ ಜಮೆ ಆಗದಿದ್ದಲ್ಲಿ ಸಂಬಂಧ ಪಟ್ಟ ಇಲಾಖೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಫಲಾನುಭವಿಗಳು ಗೊಂದಲಗೊಳ್ಳುವ ಅಗತ್ಯವಿಲ್ಲ. ಸರಕಾರ ಯಾವಾಗ ಹಣ ಬಿಡುಗಡೆ ಮಾಡುತ್ತದೆಯೋ, ಆವಾಗ ಆಧಾರ ಆಧಾರಿತ NPCIನೊಂದಿಗೆ ಜೋಡಣೆಯಾದ ಖಾತೆಗೆ ಹಣ ಜಮೆ ಆಗುತ್ತದೆ.
ಗ್ರಾಹಕರ ಯಾವುದೇ ಖಾತೆಯು NPCIನೊಂದಿಗ ಜೋಡಣೆಯಾಗದಿದ್ದಲ್ಲಿ ಹತ್ತಿರದ ಅಂಚೆ ಕಚೇರಿಗೆ ಭೇಟಿ ಕೊಟ್ಟು ಅಂಚೆ ಉಳಿತಾಯ ಖಾತೆ/IPPB ಖಾತೆಯನ್ನು ಆಧಾರ ಜೋಡಣೆಯೊಂದಿಗೆ ತೆರೆಯಬಹುದು. ಒಂದು ಆಧಾರ್‌ಗೆ ಒಂದು ಖಾತೆಯನ್ನು ಮಾತ್ರ ಜೋಡಣೆ ಮಾಡಬಹುದು ಎಂದು ತಿಳಿಸಿದ್ದಾರೆ.