ಕಂಡತ್ ಪಳ್ಳಿ ಜುಮಾ ಮಸೀದಿಯ ಅಧ್ಯಕ್ಷರಾಗಿ ಮಾಜಿ ಮೇಯರ್ ಅಶ್ರಫ್ ಆಯ್ಕೆ

Update: 2023-11-06 15:15 GMT

ಕೆ. ಅಶ್ರಫ್

ಮಂಗಳೂರು: ನಗರದ ಬಂದರ್ ಸಮೀಪದ ಕಂಡತ್ ಪಳ್ಳಿ ಜಮಾಅತ್ ಮಹಾಸಭೆಯು ರವಿವಾರ ಅಧ್ಯಕ್ಷ ಶಮೀಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಖತೀಬ್ ಪಿ.ಎ.ಮುಹಮ್ಮದ್ ರಫೀಕ್ ಮದನಿ ಅಲ್ ಕಾಮಿಲ್ ಸಖಾಫಿ ದುಆಗೈದರು.

ಮುಂದಿನ ಸಾಲಿನ ಅಧ್ಯಕ್ಷರಾಗಿ ಮಾಜಿ ಮೇಯರ್ ಕೆ. ಅಶ್ರಫ್, ಉಪಾಧ್ಯಕ್ಷರಾಗಿ ಎಸ್.ಎಂ. ಜಾಫರ್, ಪ್ರಧಾನ ಕಾರ್ಯದರ್ಶಿ ಯಾಗಿ ನಾಸಿರ್ ಕೊಪ್ಪಳ ಕಾಪೌಂಡ್, ಕೋಶಾಧಿಕಾರಿಯಾಗಿ ಕೆ. ಶಮೀಮ್ ಅಹ್ಮದ್, ಜೊತೆ ಕಾರ್ಯ  ದರ್ಶಿಯಾಗಿ ಇಮ್ರಾನ್, ಮುತವಲ್ಲಿಯಾಗಿ ಟೈಗರ್ ಫಾರೂಕ್ ಹಾಗೂ ಸದಸ್ಯರಾಗಿ ರಿಜ್ವಾನ್, ರಫೀಕ್, ಮಹ್ಮೂದ್ ಅವರನ್ನು ಆಯ್ಕೆ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News