ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ಗೆ ಉಚಿತ ಆ್ಯಂಬುಲೆನ್ಸ್ ಹಸ್ತಾಂತರ

Update: 2023-08-18 17:08 GMT

ಮಂಗಳೂರು : ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಅಧ್ಯಕ್ಷ ಓಸ್ವಾಲ್ಡ್ ಪುರ್ಟಾಡೊ ಅವರು ತನ್ನ ಹೆತ್ತವರಾದ ದಿ. ನತಾಲಿಯಾ ಪೆಡ್ರಿಕ್ ಪುರ್ಟಾಡೊರ ಸ್ಮರಣಾರ್ಥ ಉಚಿತ ಸೇವೆಗಾಗಿ ಕೊಡುಗೆಯಾಗಿ ನೀಡಲಾದ ಆ್ಯಂಬುಲೆನ್ಸ್‌ನ ಹಸ್ತಾಂತರ ಕಾರ್ಯಕ್ರಮವು ಮಂಗಳವಾರ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ನಡೆಯಿತು.

ಭಾರತೀಯ ಸೈನ್ಯದ ಸೇವೆಯಲ್ಲಿದ್ದ ನಿವೃತ್ತ ಸುಬೇದಾರ್ ಅಪ್ಪುಶೆಟ್ಟಿ ಗಣ್ಯರ ಸಮ್ಮುಖ ಆ್ಯಂಬುಲೆನ್ಸ್ ಕೀಯನ್ನು ವಾಯ್ಸ್ ಆಫ ಬ್ಲಡ್ ಡೋನರ್ಸ್‌ನ ಸ್ಥಾಪಕಾಧ್ಯಕ್ಷ ರವೂಫ್ ಬಂದರ್‌ಗೆ ಹಸ್ತಾಂತರಿಸಿದರು. ಉದ್ಯಮಿ ಎಂ.ಕೆ. ಜಾಹೀರ್ ಅಬ್ಬಾಸ್ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು.

ಈ ಸಂದರ್ಭ ಮಾಜಿ ಮೇಯರ್ ಕೆ. ಅಶ್ರಫ್, ದ.ಕ.ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ಧಿಯ ಸಂಘದ ಅಧ್ಯಕ್ಷ ಬಿ.ಕೆ. ಇಮ್ತಿಯಾಝ್, ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ಅಲ್‌ಹಕ್ ಫೌಂಡೇಶನ್‌ನ ಬಿ.ಎಸ್. ಇಮ್ತಿಯಾಝ್, ವಿಮೆನ್ಸ್ ವಿಂಗ್‌ನ ಆಲಿಶಾ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News