ಸೆ. 21ರಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಉಚಿತ ವಾಕ್ - ಶ್ರವಣ ತಪಾಸಣಾ ಶಿಬಿರ

Update: 2023-09-19 15:46 GMT

ಮಂಗಳೂರು: ಫಾದರ್ ಮುಲ್ಲರ್ ವಾಕ್ ಮತ್ತು ಶ್ರವಣ ಕಾಲೇಜಿನಲ್ಲಿ ಅಂತರ್‌ರಾಷ್ಟ್ರೀಯ ಶ್ರವಣ ದಿನ’’ದ ಅಂಗವಾಗಿ ಉಚಿತ ವಾಕ್ ಮತ್ತು ಶ್ರವಣ ತಪಾಸಣಾ ಶಿಬಿರ ಸೆ. 21 ರಿಂದ 23ರವರೆಗೆ ಬೆಳಗ್ಗೆ 9:00 ರಿಂದ ಸಾಯಂಕಾಲ 4:30 ತನಕ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ವಾಕ್ ಶ್ರವಣ ವಿಭಾಗದ ಆವರಣದಲ್ಲಿ ನಡೆಯಲಿದೆ.

ಈ ಶಿಬಿರದದಲ್ಲಿ ನೋಂದಣಿ ಉಚಿತವಾಗಿದೆ,ಹಿರಿಯ ನಾಗರಿಕರು, ವಯಸ್ಕರು ಮತ್ತು ಮಕ್ಕಳ ಮಾತು ಮತ್ತು ಶ್ರವಣ ಮೌಲ್ಯಮಾಪನ, ಉಚಿತ ಶ್ರವಣ ಚಿಕಿತ್ಸಾ ಪ್ರಯೋಗ , ಶ್ರವಣ ಸಾಧನೆಗಳಿಂದ ತೊಂದರೆಗಳ ಬಗ್ಗೆ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಶ್ರವಣ ಸಾಧನಗಳನ್ನು ಒದಗಿಸಲಾಗುವುದು.

ಎಲ್ಲ ಕ್ಲಿನಿಕಲ್ ಮೌಲ್ಯಮಾಪನ ಮತ್ತು ಚಿಕಿತ್ಸೆಯನ್ನು ತಜ್ನವ್ರತ್ತಿಪರರು ಒದಗಿಸುತ್ತಾರೆ. ಶಿಬಿರದಲ್ಲಿ ನೊಂದಾಯಿಸಿ ಕೊಳ್ಳುವವರಿಗೆ ಆರೋಗ್ಯ ಕಾರ್ಡನ್ನು ಉಚಿತವಾಗಿ ನೀಡಲಾಗುವುದು. ಫಾದರ್ ಮುಲ್ಲರ್ ಆರೋಗ್ಯ ಕಾರ್ಡ್‌ನಿಂದ ವಿವಿಧ ಸೇವೆಗಳಾದ ಸಮಾಲೋಚನೆ, ರೋಗ ನಿರ್ಣಯ ಸೇವೆಗಳು, ಲ್ಯಾಬ್ ಸೇವೆಗಳು ಮತ್ತು ಔಷಧಿಗಳ ರಿಯಾಯಿತಿಯನ್ನು ಪಡೆಯಬಹುದು. ಫೋನ್ ಕರೆಯ ಮೂಲಕ ಮಾತ್ರ ಎಲ್ಲ ನೊಂದಾವಣಿ ಪ್ರಕ್ರಿಯೆಯನ್ನು ಮಾಡಲಾಗುತ್ತದೆ. ನೋಂದಾವಣೆಗಾಗಿ ದೂರವಾಣಿ ಸಂಖ್ಯೆ 0824-238295/2238296 ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News