ಶಾಂತಿನಗರ ಗುತ್ತಕಾಡು ಖಿಲ್‌ರಿಯಾ ಜುಮ್ಮಾ ಮಸೀದಿಯ ಸುವರ್ಣ ಮಹೋತ್ಸವ: ಒಂದು ಜೋಡಿಯ ಉಚಿತ ವಿವಾಹ ಕಾರ್ಯಕ್ರಮ

Update: 2024-01-31 08:29 GMT

ಕಿನ್ನಿಗೋಳಿ: ಖಿಲ್‌ರಿಯಾ ಜುಮ್ಮಾ ಮಸೀದಿ ಶಾಂತಿನಗರ ಗುತ್ತಕಾಡು ಇದರ ಸುವರ್ಣ ಮಹೋತ್ಸವ ಅಂಗವಾಗಿ ಒಂದು ಜೋಡಿಯ ವಿವಾಹ ಸಮಾರಂಭವು ಕೆಜೆಎಂ ಸಮುದಾಯ ಭವನದಲ್ಲಿ ರವಿವಾರ ನಡೆಯಿತು.

ಸಮಾರಂಭವನ್ನು ಖಿಲ್‌ರಿಯಾ ಜುಮ್ಮಾ ಮಸೀದಿ ಖತೀಬರಾದ ಉಮರುಲ್‌ ಫಾರೂಕ್‌ ಸಖಾಫಿ ಉದ್ಘಾಟಿಸಿದರು. ಬೊಳ್ಳೂರು ಮುಹಿಯುದ್ದೀನ್ ಜುಮ್ಮಾ ಮಸೀದಿಯ ಖತೀಬ್ ಮುಹಮ್ಮದ್ ಅಝ್ ಹರ್ ಫೈಝಿ ಬೊಳ್ಳೂರು ಉಸ್ತಾದ್ ದುವಾ ಆಶೀರ್ವಚನ ಗೈದರು. ಕೆಜೆಎಂ ಅಧ್ಯಕ್ಷ ಅಬೂಬಕರ್ ಅಧ್ಯಕ್ಷತೆ ವಹಿಸಿದ್ದರು. ಕೆಜೆಎಂ ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಹಾಜಿ ಟಿ.ಎಚ್‌. ಮಯ್ಯದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಿಸ್ಬಾಹುಲ್‌ ಮದೀನ ಕಲ್ಕರೆ ಪ್ರಾಂಶುಪಾಲ ಅಬ್ದುಲ್ಲಾ ಮದನಿ, ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದ, ಎಸ್‌ಎಂಎ ರೀಜನಲ್‌ ಸಮಿತಿ ಅಧ್ಯಕ್ಷ ಅಬ್ದುಲ್‌ ರಝಾಕ್‌, ಝೋನಲ್‌ ಸಮಿತಿ ಅಧ್ಯಕ್ಷ ಅಬ್ದುಲ್‌ ಹಮೀದ್‌, ಕೆನರಾ ಇಂಡಸ್ಟ್ರೀಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ಇಕ್ಬಾಲ್‌ ಬಿ.ಎ, ಕೆ.ಎಸ್.‌ ಅಬೂಬಕ್ಕರ್‌, ಕದಿಕೆ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್‌ ರಹ್ಮಾನ್‌ ಕುಡುಂಬೂರು, ಹಾಜಿ ಅಹ್ಮದ್‌ ಕಲ್ಕರೆ, ಅಶ್ರಫ್‌ ಕಿನ್ನಿಗೋಳಿ, ತಾಲೂಕು ಪಂಚಾಯತ್‌ ಮಾಜಿ ಸದಸ್ಯ ದಿವಾಕರ್‌ ಕರ್ಕೇರ, ನವಾಝ್‌ ಕಲ್ಕರೆ, ಫಾರೂಕ್‌ ಅಹ್ಮದ್‌ ಕರ್ನಿರೆ, ಎಂಜೆಎಂ ಖತೀಬ್ ಅಶ್ರಫ್‌ ಸಅದಿ, ಸುಹೈಲ್‌ ಸಖಾಫಿ, ನೌಫಲ್‌ ಸಖಾಫಿ ಮತ್ತಿತ್ತರರು ಉಪಸ್ಥಿತರಿದ್ದರು.

ಟಿ.ಕೆ. ಅಬ್ದುಲ್‌ ಖಾದರ್‌ ಸ್ವಾಗತಿಸಿದರು. ಅಬ್ದುಲ್‌ ರಝಾಕ್‌ ವಂದಿಸಿದರು. ಅಬ್ದುಲ್‌ ಜಲೀಲ್‌ ನಿರೂಪಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News