ಧರ್ಮಸ್ಥಳದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿಗೆ ಚಾಲನೆ

Update: 2023-10-02 13:19 GMT

ಮಂಗಳೂರು, ಅ.2: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿ ತರಲಾಗಿದ್ದು, ಅ.2ರ ಸೋಮವಾರ ಗಾಂಧಿ ಜಯಂತಿ ಅಂಗವಾಗಿ ಸೋಮವಾರ ಮಹಾತ್ಮ ಗಾಂಧಿ ಪ್ರತಿಮೆಗೆ ಪುಷ್ಪಾರ್ಚಾಣೆ ಮಾಡುವ ಮೂಲಕ ರಾಜ್ಯಸಭಾ ಸದಸ್ಯ ಡಾ.ಡಿ. ವೀರೇಂದ್ರ ಹೆಗ್ಗಡೆ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.

ಗಾಂಧಿಯವರ ವಿಚಾರಧಾರೆ ಎಂದಿಗೂ ಸಾರ್ವಕಾಲಿಕ. ಸ್ವಚ್ಛತೆ ಬಗೆಗಿದ್ದ ಕಾಳಜಿ, ಬದ್ಧತೆ ನಮಗೆಲ್ಲ ಮಾದರಿ. ಈ ನಿಟ್ಟಿ ನಲ್ಲಿ ಈ ದಿವಸ ಏಕ ಬಳಕೆಯ ವಸ್ತುಗಳಾದ ಪ್ಲಾಸ್ಟಿಕ್ ಕೈ ಚೀಲಗಳು ಪ್ಲಾಸ್ಟಿಕ್ ಕಡ್ಡಿಗಳು, ದಿನ ಬಳಸುವ ಪ್ಲಾಸ್ಟಿಕ್ ವಸ್ತು ಗಳಾದ ಲೋಟ, ಚೂರಿಗಳು, ಪ್ಯಾಕಿಂಗ್‌ಗೆ ಬಳಸುವ ರ್ಯಾಪರ್, ಪ್ಲಾಸ್ಟಿಕ್ ಆಹ್ವಾನ ಪತ್ರಿಕೆ, ಪ್ಲಾಸ್ಟಿಕ್ ಹಾಗೂ ಪಿವಿಸಿ ಬ್ಯಾನರ್‌ಗಳು ಮೊದಲಾದವುಗಳನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿದರು.

ದೇಶದಾದ್ಯಂತ ಏಕಬಳಕೆಯ ಪ್ಲಾಸ್ಟಿಕ್ ನಿಷೇಧ ಹೇರಲಾಗಿದ್ದು , ಕರ್ನಾಟಕ ಸರಕಾರವು 2016 ರಿಂದಲೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಇವತ್ತಿನ ಪ್ಲಾಸ್ಟಿಕ್ ನಿಷೇಧ ರಾಜ್ಯಕ್ಕೆ ಮೊದಲು ಹಾಗೂ ಮಾದರಿ ಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪ್ರಸಸ್ನ ಭಕ್ತ, ಸ್ಥಳೀಯ ಪಂಚಾಯತ್ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಶ್ರೀನಿವಾಸ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ, ಸ್ವಚ್ಛ ಭಾರತ್ ಮಿಷನ್ (ಗ್ರಾ) ಐಇಸಿ ತಜ್ಞ ಡೊಂಬಯ್ಯ ಇಡ್ಕಿದು, ಎಚ್.ಆರ್.ಡಿ ನವೀನ್ , ಜಲ್ ಜೀವನ್ ಮಿಷನ್‌ನ ವಿಘ್ನೇಶ್, ಗ್ರಾಮ ಪಂಚಾಯತ್ ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News