ಜನರ ಸಂಕಷ್ಟಗಳಿಗೆ ಧ್ವನಿಯಾದವರು ಜನನಾಯಕ: ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು

Update: 2023-08-15 14:06 GMT

ಕೊಣಾಜೆ: ಜನರ ಸಂಕಷ್ಟಗಳಿಗೆ ಧ್ವನಿಯಾದವರು ಜನನಾಯಕನಾಗಲು ಸಾಧ್ಯ. ಅಂತಹ ಜನನಾಯಕನಿಗೆ ಜೀವನದಲ್ಲಿ ಸಾರ್ಥಕ್ಯ ಸಿಗಲು ಸಾಧ್ಯ. ಇದೇ ದಾರಿಯಲ್ಲಿ ಎರಡೂವರೆ ವರ್ಷಗಳ ಕಾಲ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸಿದ ಬದ್ರುದ್ದೀನ್ ಅಭಿನಂದನೆಗೆ ಅರ್ಹರು ಎಂದು ಅಲೆಮಾರಿ ಮತ್ತು ಅರೆಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು.

ಕಳೆದ ಎರಡೂವರೆ ವರುಷಗಳಿಂದ ಹರೇಕಳ ಗ್ರಾಮ‌ ಪಂಚಾಯತ್ ಅಧ್ಯಕ್ಷರಾಗಿದ್ದ ಬದ್ರುದ್ದೀನ್ ಫರೀದ್ ನಗರ ಅವರ ಸಾಧನೆ, ಸೇವೆ, ಕರ್ತವ್ಯಗಳನ್ನ ಪರಿಗಣಿಸಿ ಮಂಗಳವಾರದಂದು ಗ್ರಾಮ ಸೌಧದ ಸಭಾಂಗಣದಲ್ಲಿ ಹರೇಕಳದ ಬದ್ರುದ್ದೀನ್ ಅಭಿನಂದನಾ ಸಮಿತಿಯ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಶಾಸಕರು ಹಾಗೂ ಸಂಸದರು ಹರೇಕಳ ಗ್ರಾಮದ ಅಭಿವೃದ್ಧಿಗೆ ವಿವಿಧ ರೀತಿಯಲ್ಲಿ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ.ಹರೇಕಳ ಗ್ರಾಮದುದ್ದಕ್ಕೂ ಬದ್ರುದ್ದೀನ್ ಅವರು ತಮ್ಮ ಸೇವಾ ಅವಧಿಯಲ್ಲಿ ಬಹಳಷ್ಟು ಅಭಿ ವೃದ್ಧಿ ಕಾರ್ಯಗಳನ್ನ ನಡೆಸಿದ್ದಾರೆ. ಹರೇಕಳ- ಅಡ್ಯಾರ್ ಸೇತುವೆ ಕಾಮಗಾರಿಯೂ ರೂ.190 ಕೋಟಿ ಅನುದಾನದಲ್ಲಿ ಪೂರ್ಣಗೊಂಡಿರುವುದು ಬದ್ರುದ್ದೀನ್ ಅವರ ಅಧ್ಯಕ್ಷಾವಧಿಯಲ್ಲಿ ಎಂಬುದು ಹೆಮ್ಮೆಯ ವಿಚಾರ. ಈ ಮೂಲಕ ಗ್ರಾಮದ ಜನರಿಗೆ ಬಹುಬೇಗ ನಗರ ತಲುಪುವ ವ್ಯವಸ್ಥೆ ಆಗಿರುವುದು ಗ್ರಾಮದ ಜನರಿಗೆ ದೊರೆತ ಬಹುದೊಡ್ಡ ಉಡುಗೊರೆ. ಗ್ರಾಮದ ಜನರಿಗೆ ಎಲ್ಲಾ ರೀತಿಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸುವ ಸುಸಜ್ಜಿತವಾದ ವ್ಯವಸ್ಥೆ ಹರೇಕಳ ಗ್ರಾಮದಲ್ಲಿದೆ. ಇಂತಹ ವ್ಯವಸ್ಥೆ ಕಲ್ಪಿಸಿಕೊಟ್ಟ ಬದ್ರುದ್ದೀನ್ ಅಭಿನಂದನೆಗೆ ಅರ್ಹರು ಎಂದರು.

ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಚ್. ಮಲಾರ್,ತಾ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ,ಕೊಣಾಜೆ ಗ್ರಾ.ಪಂ ಮಾಜಿ ಅಧ್ಯಕ್ಷೆ ಚಂಚಲಾಕ್ಷಿ,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ, ಕಾರ್ಯ ದರ್ಶಿ ತಾರಾಕ್ಷಿ, ಗ್ರಾ.ಪಂ ಉಪಾಧ್ಯಕ್ಷೆ ಕಲ್ಯಾಣಿ , ಮಾಜಿ ಒಂಬುಡ್ಸ್ ಮೆನ್ ಶೀನ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News