ಕಡಬ: ಕುಮಾರಧಾರ ನದಿ ಮಧ್ಯೆ ಸಿಲುಕಿದ್ದ ಯುವಕನ ರಕ್ಷಣೆ

Update: 2024-07-08 04:58 GMT

ಕಡಬ, ಜು.8: ಯುವಕನೋರ್ವ ಕುಮಾರಧಾರ ನದಿಯ ನೆರೆ ನೀರಿನಲ್ಲಿ ಸಿಲುಕಿ, ಸಹಾಯಕ್ಕಾಗಿ ಬೊಬ್ಬೆ ಹಾಕುತ್ತಿರುವ ದೃಶ್ಯ ಇಲ್ಲಿನ ಪುಳಿಕುಕ್ಕು ಎಂಬಲ್ಲಿ ಸೋಮವಾರ ಬೆಳಗ್ಗೆ ಕಂಡುಬಂದಿತ್ತು. ಬಳಿಕ ಅಗ್ನಿಶಾಮಕ ದಳ ಆತನನ್ನು ರಕ್ಷಿಸಿದೆ.

ಪುಳಿಕುಕ್ಕುವಿನಲ್ಲಿ ಕುಮಾರಧಾರ ನದಿ ಬಹುತೇಕ ತುಂಬಿ ಹರಿಯುತ್ತಿದೆ. ಈ ಮಧ್ಯೆ ಇಂದು ಬೆಳಗ್ಗೆ ಯುವಕನೋರ್ವ ನದಿಯಲ್ಲಿ ಪೊದೆಗಳನ್ನು ಹಿಡಿದು ರಕ್ಷಿಸುವಂತೆ ಬೊಬ್ಬೆ ಹಾಕುತ್ತಿದ್ದ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಅದರಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಯುವಕನನ್ನು ನದಿಯಿಂದ ಮೇಲೆತ್ತಿ ರಕ್ಷಿಸಿದ್ದಾರೆ. ಬಳಿಕ ಆತನನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ನದಿಯಲ್ಲಿ ಸಿಲುಕಿದ್ದ ಯುವಕನನ್ನು ಮೂಲತಃ ಬೆಂಗಳೂರು ನಿವಾಸಿ ಎಂದು ಗುರುತಿಸಲಾಗಿದೆ. ಆತನಿಗೆ ಸೇರಿದ್ದೆನ್ನಲಾದ ಬ್ಯಾಗ್ ಪುಳಿಕುಕ್ಕು ಬಸ್ ನಿಲ್ದಾಣದ ಬಳಿ ದೊರೆತಿದೆ.

ಆತ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News