ಕಾನ ಕಟ್ಲ ಶಾಲೆಯ ಭೂ ಹಗರಣ: ವಿವಾದಿತ ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್‌ ಭೇಟಿ

Update: 2023-11-20 17:38 GMT

ಸುರತ್ಕಲ್, ನ.20: ಇಲ್ಲಿನ ಕಾನ ಕಟ್ಲದ ದ.ಕ. ಜಿಲ್ಲಾ ಪಂಚಾಯತ್‌ ಹಿರಿಯ ಪ್ರಾಥಮಿಕ ಶಾಲೆಯ ಭೂ ಹಗರಣದ ಸಂಬಂಧ ದ.ಕ. ಜಿಲ್ಲಾ ತಹಶೀಲ್ದಾರ್‌ ಪ್ರಶಾಂತ್‌ ಪಾಟೀಲ್‌ ಅವರು ಸೋಮವಾರ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಸಂಘದ ಪದಾಧಿಕಾರಿಗಗಳು ತಹಶೀಲ್ದಾರ್‌ ಅವರಿಗೆ ಶಾಲೆಯ ಆಟದ ಮೈದಾನದಲ್ಲಿ ಅನಧೀಕೃತವಾಗಿ ಮನೆ ನಿರ್ಮಾಣ ಮಾಡಿರುವ, ಆಟದ ಮೈದಾನದದಲ್ಲಿ ಗುರುತಿನ ಕಲ್ಲುಗಳನ್ನು ಹಾಕಿ ನಿವೇಶನಗಳನ್ನು ಪರಭಾರೆ ಮಾಡಿರುವ ಮತ್ತು ಶಾಲೆಯ ನಿವೇಶನ ಹರಿದು ಹಂಚಿಹೋದ ಬಳಿಕ ನಿರ್ಮಿಸಲಾಗಿದ್ದ ಕಾಂಪೌಂಡ್‌ ಗೋಡೆಯನ್ನು ಒಡೆದು ಮನೆ ನಿರ್ಮಿಸಿರುವ ಕುರಿತು ಸಾಕ್ಷಿ ಸಹಿತ ಮನವರಿಕೆ ಮಾಡಿದರು. ಜೊತೆಗೆ ಶಾಲೆಯ ಭೂಮಿಯನ್ನು ಉಳಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.

ಸ್ಥಳಕ್ಕೆ ಭೇಟಿ ನೀಡಿದ ಬಗ್ಗೆ ವಾರ್ತಾಭಾರತಿ ಜೊತೆ ಮಾತನಾಡಿದ ತಹಶೀಲ್ದಾರ್‌ ಪ್ರಶಾಂತ್‌ ಪಾಟೀಲ್‌ ಅವರು, ಕ್ಷೇತ್ರ ಶಿಕ್ಷಣಾಧಿಕಾರಿಯವರ ದೂರಿನಂತೆ ಇಂದು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಲಾಗಿದೆ. ನಿವೇಶನದ ಸರ್ವೇ ಮಾಡಲಾಗಿದೆ. ಅದರ ವರದಿ ಬಂದ ಬಳಿಕ ಮುಂದಿನ ಕ್ರಮ ವಹಿಸಲಾಗುವುದು. ವರದಿಯಲ್ಲಿ ಶಾಲೆಯ ಎದುರಿಗೆ ಇರುವ ಭೂಮಿ ಶಾಲೆಗೆ ಸೇರಿದ್ದು ಎಂದು ವರದಿ ಬಂದರೆ, ಭೂ ಅತಿಕ್ರಮದ ಕುರಿತು ಶಾಲಾ ಮುಖ್ಯೋಪಾಧ್ಯಾಯರು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News