ಲ್ಯಾಪ್‌ಟಾಪ್ ಕಳವು

Update: 2024-08-12 14:57 GMT

ಮಂಗಳೂರು, ಆ.12: ನಗರದ ಪಿಜಿಯೊಂದರಿಂದ 2 ಲ್ಯಾಪ್‌ಟಾಪ್‌ಗಳು, ಹಣ ಮತ್ತು ಎಟಿಎಂ ಕಾರ್ಡ್‌ನ್ನು ಕಳವಾದ ಘಟನೆ ಆ.9ರಂದು ನಡೆದಿದೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಯೂರ್ ನಾಯ್ಕ್ ಮತ್ತು ಚರಣ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆ.9ರಂದು ರಾತ್ರಿ ಕಂಪೆನಿಯ ಕೆಲಸ ಮುಗಿಸಿ ಬೇರೆ ಬೇರೆ ಬ್ಯಾಗ್‌ಗಳಲ್ಲಿ 2 ಲ್ಯಾಪ್‌ಟಾಪ್‌ಗಳನ್ನಿಟ್ಟು ಮಲಗಿದ್ದರು. ಮರುದಿನ ಬೆಳಗ್ಗೆ 8ಕ್ಕೆ ಎದ್ದು ನೋಡಿದಾಗ 2 ಲ್ಯಾಪ್‌ಟಾಪ್‌ಗಳು, 800 ರೂ., ಎಟಿಎಂ ಕಾರ್ಡ್ ಸಹಿತ ಅಂದಾಜು 2,11,500 ರೂ. ಮೌಲ್ಯದ ಸೊತ್ತುಗಳು ಕಳವಾಗಿರು ವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News