ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಲೆವೆಲ್ 3 ಏರ್‌ಪೋರ್ಟ್ ಕಸ್ಟಮರ್ ಎಕ್ಸ್‌ಪೀರಿಯನ್ಸ್’ ಮಾನ್ಯತೆ
Update: 2024-02-18 15:43 GMT
ಮಂಗಳೂರು: ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವು ಏರ್‌ಪೋರ್ಟ್ ಕೌನ್ಸಿಲ್ ಇಂಟರ್ ನ್ಯಾಶನಲ್ (ಎಸಿಐ) ನಿಂದ ‘ಲೆವೆಲ್ 3 ಏರ್‌ಪೋರ್ಟ್ ಕಸ್ಟಮರ್ ಎಕ್ಸ್‌ಪೀರಿಯನ್ಸ್’ ಮಾನ್ಯತೆಗೆ ಆಯ್ಕೆಯಾಗಿದೆ.
ಈ ಮಾನ್ಯತೆಯ ಅವಧಿ ಒಂದು ವರ್ಷ ತನಕ ಇರುತ್ತದೆ. ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣವು 2022ರ ಡಿಸೆಂಬರ್‌ನಲ್ಲಿ ಲೆವೆಲ್ 2 ಮಾನ್ಯತೆ ಪಡೆದಿತ್ತು. ಅಟ್ಲಾಂಟಾದಲ್ಲಿ 2024 ಸೆಪ್ಟೆಂಬರ್ 24 ರಿಂದ 26 ರವರೆಗೆ ನಡೆಯುವ ವಾರ್ಷಿಕ ಜಾಗತಿಕ ಶೃಂಗಸಭೆಯಲ್ಲಿ ಮಾನ್ಯತೆಯನ್ನು ನೀಡಲಾಗುತ್ತದೆ.
ಐದು ಮಿಲಿಯನ್ ಪ್ರಯಾಣಿಕರನ್ನು ನಿಭಾಯಿಸಿದ ಹೆಗ್ಗಳಿಕೆಗೂ ಈ ವಿಮಾನ ನಿಲ್ದಾಣ ಪಾತ್ರವಾಗಿದೆ. ಈ ವಿಭಾಗದಲ್ಲಿ ಈ ಮೈಲಿಗಲ್ಲನ್ನು ತಲುಪಿದ ಭಾರತದ ಮೊದಲ ವಿಮಾನ ನಿಲ್ದಾಣವಾಗಿದೆ. ಇದೀಗ ಮಂಗಳೂರು ವಿಮಾನ ನಿಲ್ದಾಣವು 4ನೇ ಹಂತದ ಮಾನ್ಯತೆಯ ಮೇಲೆ ತನ್ನ ದೃಷ್ಟಿಯನ್ನು ಇರಿಸಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.