ಮಂಗಳೂರು: ರೈಲಿನಡಿಗೆ ಬಿದ್ದು ಅಪರಿಚಿತ ವ್ಯಕ್ತಿ ಮೃತ್ಯು

Update: 2024-01-17 16:23 GMT

ಸಾಂದರ್ಭಿಕ ಚಿತ್ರ (PTI)

ಮಂಗಳೂರು: ನೇತ್ರಾವತಿ ಕ್ಯಾಬಿನ್-ಉಳ್ಳಾಲ ಆಫ್ ಲೈನ್‌ನಲ್ಲಿ ಬುಧವಾರ ಬೆಳಗ್ಗೆ 10:50ಕ್ಕೆ ಸುಮಾರು 40ರಿಂದ 45 ವರ್ಷ ವಯಸ್ಸಿನ ಅಪರಿಚಿತ ಗಂಡಸು ರೈಲಿನಡಿಗೆ ಬಿದ್ದು ಮೃತಪಟ್ಟಿರುವುದಾಗಿ ರೈಲ್ವೆ ಪೊಲೀಸರು ಮಾಹಿತಿ ನೀಡಿದ್ದಾರೆ.

5.6 ಅಡಿ ಎತ್ತರದ, ಎಣ್ಣೆಗೆಂಪು ಮೈಬಣ್ಣದ, ದೃಢ ಶರೀರದ ಈ ವ್ಯಕ್ತಿಯು ಕಂದು ಮತ್ತು ತಿಳಿ ಮೆರೂನ್ ಬಣ್ಣದ ಲೈನಿಂಗ್ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ. ವಾರಸುದಾರರಿದ್ದರೆ ಮಂಗಳೂರು ರೈಲ್ವೆ ಠಾಣೆ (0824-2220559)ಯನ್ನು ಸಂಪರ್ಕಿಸಬಹುದು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News