ಮಂಗಳೂರು: ಟಾಸ್ಕ್ ನೀಡಿ 25.56 ಲಕ್ಷ ರೂ. ವಂಚನೆ

Update: 2023-12-05 15:53 GMT

ಮಂಗಳೂರು: ಟೆಲಿಗ್ರಾಂ ಆ್ಯಪ್ ಮೂಲಕ ಪಾರ್ಟ್ ಟೈಂ ಜಾಬ್ ಎಂದು ರೇಟಿಂಗ್ ನೀಡುವ ಟಾಸ್ಕ್ ಕೊಟ್ಟು ವ್ಯಕ್ತಿಯೊಬ್ಬರಿಗೆ 27.56 ಲ.ರೂ. ವಂಚಿಸಿರುವ ಘಟನೆ ವರದಿಯಾಗಿದೆ.

ದೂರುದಾರರಿಗೆ ಜೂ.19ರಂದು ಟೆಲಿಗ್ರಾಮ್ ಆ್ಯಪ್‌ನಲ್ಲಿ ಹೊಟೇಲ್ ಮತ್ತು ಹೋಮ್ ಸ್ಟೇಗಳಿಗೆ ರೇಟಿಂಗ್ ನೀಡುವ ಟಾಸ್ಕ್ ಪೂರ್ಣಗೊಳಿಸುವ ಪಾರ್ಟ್ ಟೈಂ ಜಾಬ್ ಮಾಡಿ ಹಣ ಗಳಿಸಬಹುದು ಎಂದು ಅಪರಿಚಿತ ವ್ಯಕ್ತಿಯಿಂದ ಮೆಸೇಜ್ ಬಂದಿತ್ತು ಎನ್ನಲಾಗಿದೆ.

ಇದನ್ನು ನಂಬಿದ ದೂರುದಾರರು Aditi MMT guru ಎಂಬ ಗ್ರೂಪ್‌ನಲ್ಲಿ 30 ಟಾಸ್ಕ್ ಪೂರ್ಣಗೊಳಿಸಿದ್ದರು. ಅವರಿಗೆ ಅಪರಿಚಿತ ವ್ಯಕ್ತಿ 900 ರೂ.ಗಳನ್ನು ಲಾಭಾಂಶವೆಂದು ನೀಡಿದ್ದರು. ಅದೇ ದಿನ ಮತ್ತೆ 11,000 ರೂ. ಹೂಡಿಕೆ ಮಾಡಿಸಿ ಒಮ್ಮೆ 20,000 ರೂ. ಹಾಗೂ ಇನ್ನೊಮ್ಮೆ 70,000 ರೂ.ಗಳನ್ನು ಲಾಂಭಾಂಶವೆಂದು ನೀಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇದೇ ರೀತಿ ಹಣ ಹೂಡಿಕೆ ಮಾಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ನಂಬಿಸಿ ಜೂ.19ರಿಂದ ಆ.26ರವರೆಗೆ ಹಂತಹಂತ ವಾಗಿ ಒಟ್ಟು 27,56,129 ರೂ.ಗಳನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿಕೊಂಡು ಅನಂತರ ಯಾವುದೇ ಲಾಭಾಂಶ ನೀಡದೆ ವಂಚಿಸಿರುವುದಾಗಿ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News