ಮಂಗಳೂರು: ಅಮೃತಾನಂದಮಯಿಯ 70ನೆ ಜನ್ಮ ದಿನಾಚರಣೆ

Update: 2023-10-08 15:18 GMT

ಮಂಗಳೂರು, ಅ.8: ಸದ್ಗುರು ಮಾತಾ ಅಮೃತಾನಂದಮಯಿ ದೇವಿಯ 70ನೆ ಜನ್ಮದಿನಚರಣೆಯು ರವಿವಾರ ಬೋಳೂರು ಶ್ರೀ ಬ್ರಹ್ಮಸ್ಥಾನ ಕ್ಷೇತ್ರದಲ್ಲಿ ಪೂಜಾವಿಧಿಯೊಂದಿಗೆ ನಡೆಯಿತು. ಬಳಿಕ ನಗರದ ಉರ್ವಸ್ಟೋರ್ ಬಳಿಯಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಮಠಾಧಿಪತಿಗಳಾದ ಸ್ವಾಮಿನಿ ಮಂಗಳಾಮೃತ ಪ್ರಾಣರವರ ಸಾರಥ್ಯದಲ್ಲಿ ಆಧ್ಯಾತ್ಮಿಕ ಕಾರ್ಯ ಕ್ರಮ ನಡೆಸಲಾಯಿತು.

ಅಮೃತೋತ್ಸವ 2023-ರ ಸಭಾ ಕಾರ್ಯಕ್ರಮದಲ್ಲಿ ಅಮ್ಮನವರ ಮಾನವೀಯ ಸೇವೆಗಳ ವಿವಿಧ ಉಪಕ್ರಮಗಳಿಗೆ ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರು ಭಾಗವಹಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಆಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ವೈದ್ಯಕೀಯ ಸೇವೆಗಳ ಮೂಲಕ ದೇಶ ವಿದೇಶ ಗಳ ಕೋಟ್ಯಾಂತರ ಜನರ ಆಶಾಕಿರಣವೆನಿಸಿರುವ ಅಮೃತಾನಂದಮಯಿ ಭಾರತರತ್ನ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದರು.

ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾದಕದ್ರವ್ಯ ಸೇವನೆ ವಿರುದ್ಧ ಜನಜಾಗೃತಿ ಮೂಡಿಸುವ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಲೆಫ್ಟಿನೆಂಟ್ ಕರ್ನಲ ವಿವೇಕ್ ಬಿಂದ್ರಾ ಬೀಜದುಂಡೆಗಳನ್ನು ವಿತರಿಸಿದರು. ವೇದಿಕೆಯಲ್ಲಿ ಸೇವಾ ಸಮಿತಿಯ ಅಧ್ಯಕ್ಷ ಡಾ.ವಸಂತ ಕುಮಾರ್ ಪೆರ್ಲ ಉಪಸ್ಥಿತರಿದ್ದರು. ಡಾ.ದೇವದಾಸ್ ಪುತ್ರನ್ ಹಾಗೂ ಅಕ್ಷತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News