ಮಂಗಳೂರು ವಿಮಾನ ನಿಲ್ದಾಣ: ವರ್ಷಾಂತ್ಯದಲ್ಲಿ ದಾಖಲೆ ಸಂಖ್ಯೆಯ ಪ್ರಯಾಣಿಕರು

Update: 2024-01-01 15:42 GMT

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 2023ರ ಡಿಸೆಂಬರ್ ತಿಂಗಳಿನ ಕೊನೆಯ ದಿನದಲ್ಲಿ ದಾಖಲೆಯ ಪ್ರಯಾಣಿಕರನ್ನು ನಿರ್ವಹಿಸಿದೆ.

ಡಿಸೆಂಬರ್ 31ರಂದು 7548 ಪ್ರಯಾಣಿಕರನ್ನು ನಿರ್ವಹಿಸಿದೆ. 2023ರ ನವೆಂಬರ್ 25ರಂದು 7468 ಪ್ರಯಾಣಿಕರನ್ನು ನಿರ್ವಹಿಸಿತ್ತು.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಡಿಸೆಂಬರ್ ನಲ್ಲಿ 12 ದಿನಗಳ ಕಾಲ ಹೊಸ ವರ್ಷದ ಮುನ್ನಾದಿನ ದಂದು 7548 ಪ್ರಯಾಣಿಕರು ಸೇರಿದಂತೆ ಪ್ರತಿದಿನ 7000ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿರ್ವಹಿಸಿದೆ. ಈ 7,000 ಕ್ಕೂ ಹೆಚ್ಚು ಪ್ರಯಾಣಿಕರ ಪ್ರಯಾಣದ ಬಹುಪಾಲು ಡಿಸೆಂಬರ್ 9-10, 16-17, 23-25 ಮತ್ತು 30-31 ರ ವಾರಾಂತ್ಯದಲ್ಲಿ ಬಂದಿದೆ. ಕ್ರಿಸ್ ಮಸ್ ಗೆ ಮುಂಚಿನ ಮೂರು ದಿನಗಳಲ್ಲಿ ವಿಮಾನ ನಿಲ್ದಾಣವು ಕ್ರಮವಾಗಿ 7089, 7220 ಮತ್ತು 7034 ಜನರನ್ನು ಸ್ವೀಕರಿಸಿದೆ. ನವೆಂಬರ್ 2023ರಲ್ಲಿ, ವಿಮಾನ ನಿಲ್ದಾಣವು 1.78 ಲಕ್ಷ ಪ್ರಯಾಣಿಕರನ್ನು ನಿರ್ವಹಿಸಿತ್ತು.

ವಿವಿಧ ಸವಾಲುಗಳ ಹೊರತಾಗಿಯೂ ವಾಯುಯಾನ ಪ್ರಯಾಣವು ದೇಶೀಯವಾಗಿ ಮತ್ತು ಅಂತರ ರಾಷ್ಟ್ರೀಯವಾಗಿ ಬೆಳೆಯುತ್ತಿದೆ ಎಂಬುದರ ಸ್ಪಷ್ಟ ಸೂಚನೆಯಾಗಿದೆ ಮತ್ತು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಈ ಬೆಳವಣಿಗೆಯಲ್ಲಿ ತನ್ನಪಾತ್ರವನ್ನು ವಹಿಸಲು ಹೆಮ್ಮೆಪಡುತ್ತದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಇಂಡಿಗೊ ಕೂಡ ತಮ್ಮ ಪಾತ್ರವನ್ನು ವಹಿಸುತ್ತಿವೆ ಎಂದು ವಕ್ತಾರರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News