ಮಂಗಳೂರು: ಮಾದಕ ವಸ್ತು ಮಾರಾಟ ಆರೋಪ; ಇಬ್ಬರ ಬಂಧನ

Update: 2024-02-05 16:55 GMT

ಮಂಗಳೂರು, ಫೆ.5: ಮಾದಕ ವಸ್ತು ಮಾರಾಟವನ್ನು ತಡೆಗಟ್ಟು ನಿಟ್ಟಿನಲ್ಲಿ ರವಿವಾರ ರಾತ್ರಿ ಕಾರ್ಯಾಚರಣೆ ನಡೆಸಿರುವ ಕೇಂದ್ರ ಉಪ ವಿಭಾಗದ ‘ಆ್ಯಂಟಿ ಡ್ರಗ್ ತಂಡ’ವು ನಗರದ ಬಲ್ಮಠ ನ್ಯೂ ರೋಡ್‌ನಲ್ಲಿರುವ ಸಾರ್ವಜನಿಕ ರಸ್ತೆ ಬದಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿದೆ.

ಆರೋಪಿಗಳನ್ನು ಅತ್ತಾವರದ ಆದಿತ್ಯ ಕೆ.(29) ಮತ್ತು ಅಡ್ಯಾರ್‌ಪದವಿನ ರೋಹನ್ ಸಿಕ್ವೇರಾ (33) ಎಂದು ಗುರುತಿಸಲಾಗಿದೆ.

ಆರೋಪಿಗಳಿಂದ 50,000 ರೂ. ಮೌಲ್ಯದ 27 ಗ್ರಾಂ ಹೈಡ್ರೋವೀಡ್ ಗಾಂಜಾ, 1 ಲಕ್ಷ ರೂ. ಮೌಲ್ಯದ 2 ಕೆಜಿ 95 ಗ್ರಾಂನ ಗಾಂಜಾ, 8,000 ರೂ. ಮೌಲ್ಯದ ಗಾಂಜಾ ಆಯಿಲ್, 16,800 ರೂ. ಮೌಲ್ಯದ ಎಲ್‌ಎಸ್‌ಡಿ ಹಾಗೂ 2 ಡಿಜಿಟಲ್ ತೂಕ ಮಾಪನಗಳು, ಕೃತ್ಯಕ್ಕೆ ಬಳಸಿದ 90,000 ರೂ. ಮೌಲ್ಯದ 2 ಮೊಬೈಲ್ ಪೋನ್, 20 ಲಕ್ಷ ರೂ. ಮೌಲ್ಯದ ಕಾರು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳ ವಿರುದ್ಧ ಬಂದರ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News