ಮಂಗಳೂರು: ʼಬ್ಯಾಂಕ್ ಆಫ್ ಬರೋಡಾʼ ಸಂಸ್ಥಾಪನಾ ದಿನಾಚರಣೆ

Update: 2023-07-20 17:31 GMT

ಮಂಗಳೂರು: ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡಾ (ಬ್ಯಾಂಕ್) ಗುರುವಾರ116ನೆ ಸಂಸ್ಥಾಪನಾ ದಿನದ ಕಾರ್ಯಕ್ರಮವು ಮಂಗಳೂರಿನ ಉರ್ವಾ ಜಿಲ್ಲಾ ಡಾ.ಅಂಬೇಡ್ಕರ್ ಭವನದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್.ಕೆ.ಡಿ.ಆರ್.ಒ.ಪಿ ಟ್ರಸ್ಟ್ ನ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ಮಾತನಾಡುತ್ತಾ,  ಸ್ವ ಸಹಾಯ ಸಂಘಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿದೆ. ಉತ್ತಮ ಮನೆ, ಉತ್ತಮ ಆಸ್ಪತ್ರೆ ಗಳ ಸೇವೆ ಈ ಎಲ್ಲಾ ಬೇಡಿಕೆಗಳನ್ನು ಸೇರಿದಂತೆ ಸೂಕ್ತ ಸ್ಪಂದನೆ ಬ್ಯಾಂಕ್ ನಿಂದ ದೊರೆಯುವಂತಾಗಲಿ ಎಂದರು. ಜಿಲ್ಲೆಯಲ್ಲಿ ವಿಜಯ ಬ್ಯಾಂಕ್ ರೈತರ ಮೂಲಕ ಹುಟ್ಟಿ ದ ಬ್ಯಾಂಕ್ ವಿಲೀನ ಗೊಂಡ ಬಳಿಕ ಬ್ಯಾಂಕ್ ಆಫ್ ಬರೋಡಾದ ಮೂಲಕ ಸೇವೆ ನೀಡುತ್ತಿದೆ ಎಂದರು.

ಬ್ಯಾಂಕ್ ಆಫ್ ಬಾರ್ಡೋ (ಹಿಂದಿನ ವಿಜಯಾ ಬ್ಯಾಂಕ್) ಮಾಜಿ ಕಾರ್ಯ ನಿರ್ವಾಹಕ ನಿರ್ದೇಶಕರಾದ ಕೆ.ಆರ್. ಶೆಣೈ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಬ್ಯಾಂಕ್ ಆಫ್ ಬರೋಡಾದಲ್ಲಿನ ತಮ್ಮ ಅನುಭವ ವ್ಯಕ್ತ ಪಡಿಸಿದರು.

ಮಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕಿ ಮತ್ತು ವಲಯ ಮುಖ್ಯಸ್ಥರಾದ ಗಾಯತ್ರಿ ಆರ್. ಬ್ಯಾಂಕ್‌ನ ಪ್ರಮುಖ ಸಾಮರ್ಥ್ಯಗಳು ಮತ್ತು ಮಂಗಳೂರು ವಲಯದಲ್ಲಿ ಬ್ಯಾಂಕ್‌ನ ಬೆಳವಣಿಗೆಗಳು, ಬ್ಯಾಂಕಿನ 116 ವರ್ಷಗಳ ಧ್ಯೇಯ ದಂತೆ ಶ್ರೇಷ್ಠತೆಗಾಗಿ ಶ್ರಮಿಸಿ ಮತ್ತು ಬಲವಾದ, ಹೆಚ್ಚು ಸಮೃದ್ಧ ಭವಿಷ್ಯವನ್ನು ಸಮಗ್ರವಾಗಿ ನಿರ್ಮಿಸುವುದಾಗಿದೆ. ಈ ಬ್ಯಾಂಕ್ ಆಫ್ ಬರೋಡಾವನ್ನು ದಾರ್ಶನಿಕ ಮತ್ತು ಸುಧಾರಕ ಸರ್ ಮಹಾರಾಜ ಸಯಾಜಿರಾವ್ ಗಾಯಕ್ವಾಡ್ ಸ್ಥಾಪಿಸಿದರು. 1908 ರಲ್ಲಿ ಬರೋಡಾದ ಮಾಂಡವಿಯಲ್ಲಿ ಸ್ಥಾಪಿಸಲಾದ ಮೊದಲ ಶಾಖೆಯಿಂದ, ಬ್ಯಾಂಕ್ ಆಫ್ ಬರೋಡಾ ಇಂದು ದೇಶದ ಎರಡನೆ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿ ಮೂಡಿ ಬಂದಿದೆ. ಬ್ಯಾಂಕ್ 17 ದೇಶಗಳಲ್ಲಿ ನೆಟ್‌ವರ್ಕ್‌ ನೊಂದಿಗೆ ಪ್ರಬಲ ಅಂತರರಾಷ್ಟ್ರೀಯ ಜಾಲವನ್ನು ಹೊಂದಿದೆ ಎಂದರು.

ಬ್ಯಾಂಕ್ ಆಫ್ ಬರೋಡಾ ಭಾರತದ ಪ್ರಮುಖ ವಾಣಿಜ್ಯ ಬ್ಯಾಂಕುಗಳಲ್ಲಿ ಒಂದಾಗಿದೆ. 63 97% ಪಾಲನ್ನು ಹೊಂದಿದೆ, ಭಾರತ ಸರ್ಕಾರದ ಸ್ವಾಮ್ಯದಲ್ಲಿದೆ. ಐದು ಖಂಡಗಳಲ್ಲಿ 17 ದೇಶಗಳಲ್ಲಿ ಹರಡಿರುವ ಶಾಖೆಗಳ ಮೂಲಕ 150 ಮಿಲಿಯನ್ ‌ಗಿಂತಲೂ ಹೆಚ್ಚಿನ ಜಾಗತಿಕ ಗ್ರಾಹಕರ ನೆಲೆಯನ್ನು ಬ್ಯಾಂಕ್ ಹೊಂದಿದೆ. ಅತ್ಯಾಧುನಿಕ ಡಿಜಿಟಲ್ ಬ್ಯಾಂಕಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕಎಲ್ಲಾ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುತ್ತಿದೆ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕ್‌ ವತಿಯಿಂದ ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಗ್ರಾಹಕರನ್ನು ಸನ್ಮಾನಿಸಲಾಯಿತು. ಮಧ್ಯಮ ಸಣ್ಣ ಅತೀ ಸಣ್ಣ ಉದ್ಯಮಿಗಳಲ್ಲಿ ವಿಜ್ಞಾನ ಮತ್ತು ಔಷಧ, ಸಾಹಿತ್ಯ, ಸಮಾಜಕಾರ್ಯ ಉದ್ಯಮ, ಕ್ರೀಡೆ ಮತ್ತು ಕಲೆ ಮತ್ತು ಸಿನಿಮಾ ಸಂಸ್ಥಾಪನಾ ದಿನಾಚರಣೆಯು ಅಂಗವಾಗಿ ಬ್ಯಾಂಕ್ ಆಫ್ ಬರೋಡಾ, ವಲಯ ಕಚೇರಿ, ಮಂಗಳೂರು, ಜ್ಯೋತಿ ವೃತ್ತದಿಂದ ಕ್ಲಾಕ್ ಟವರ್‌ವರೆಗೆ ವಾಕಥಾನ್‌ನೊಂದಿಗೆ ಪ್ರಾರಂಭವಾಯಿತು.

ಉಪ ವಲಯ ಮುಖ್ಯಸ್ಥರಾದ ರಮೇಶ್ ಕಾನಡೆ ಮತ್ತು ಡಿಜಿಎಂ-ನೆಟ್‌ವರ್ಕ್ ಅಶ್ವಿನಿ ಕುಮಾರ್ ಅವರು ಧ್ವಜಾರೋಹಣ ಮಾಡಿದರು ಮತ್ತು ಎ.ಟಿ.ವಿ.ಎಸ್.ಪ್ರಸಾದ್, ಮಂಗಳೂರು ನಗರ ಪ್ರಾದೇಶಿಕ ವ್ಯವಸ್ಥಾಪಕ ಎಟಿವಿಎಸ್ ಪ್ರಸಾದ್ ಮಂಗಳೂರಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

ಮಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕಿ ಮತ್ತು ವಲಯ ಮುಖ್ಯಸ್ಥರಾದ ಗಾಯತ್ರಿ ಆರ್. ಬ್ಯಾಂಕ್‌ನ ಪ್ರಮುಖ ಸಾಮರ್ಥ್ಯಗಳು ಮತ್ತು ಮಂಗಳೂರು ವಲಯದಲ್ಲಿ ಬ್ಯಾಂಕ್‌ನ ಬೆಳವಣಿಗೆಗಳು, ಮಂಗಳ ಸೇವಾ ಸಮಿತಿಯಂತಹ ಸಿಎಸ್‌ಆರ್ ಚಟುವಟಿಕೆಗಳ ಸಂಘಟನೆಗಳ ಭಾಗವಾಗಿ, ಬ್ಯಾಂಕ್ ಆಫ್ ಬರೋಡಾದ ವತಿಯಿಂದ ತೊಕ್ಕೊಟ್ಟು, ಸ್ನೇಹದೀಪ ಎಚ್‌ಐವಿ ಕೇಂದ್ರ ಬಿಜೈ ಕಾಪಿಕಾಡ್ ಮತ್ತು ಸ್ವಾಮಿ ಶ್ರದಾನಂದ ಸೇವಾಶ್ರಮ ಆರ್ಯ ಸಮಾಜ ರಸ್ತೆ ಬಲ್ಮಠಕ್ಕೆ ಬ್ಯಾಂಕ್‌ನ ವತಿಯಿಂದ ಬೆಂಬಲ ನೀಡಲಾಯಿತು. ರಮೇಶ್ ಕಾನಡೆ, ಉಪ ವಲಯ ಮುಖ್ಯಸ್ಥರಾದ ಅಶ್ವಿನಿ ಕುಮಾರ್ ಉಪಸ್ಥಿತರಿದ್ದರು. ಡಿಜಿಎಂ-ನೆಟ್‌ವರ್ಕ್ ಮತ್ತು ಮಂಗಳೂರು ನಗರ ಪ್ರಾದೇಶಿಕ ವ್ಯವಸ್ಥಾಪಕರಾದ ಎಂ.ವಿ.ಎಸ್ ಸ್ವಾಗತಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News