ಮಂಗಳೂರು: ಎಚ್ ಐ ಎಫ್ ನಿಂದ ಎಸ್ ಎಂ ಬಶೀರ್ ಕುರಿತ ಪುಸ್ತಕ 'ಬಿಗ್ ಬಿ' ಬಿಡುಗಡೆ

Update: 2023-12-01 16:48 GMT

ಮಂಗಳೂರು, ಡಿ.1: ಶುಕ್ರವಾರ ಸಂಜೆ ಇಲ್ಲಿನ ಹೈಲ್ಯಾಂಡ್ ಇಸ್ಲಾಮಿಕ್ ಫೋರಂ (ಎಚ್ ಐ ಎಫ್) ನ ಆಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿವಂಗತ ಎಸ್ ಎಂ ಬಶೀರ್ ಅವರ ಬದುಕು, ಸಾಧನೆ ಹಾಗು ಚಿಂತನೆ ಕುರಿತ ಪುಸ್ತಕ 'ಬಿಗ್ ಬಿ' ಯನ್ನು ಬಿಡುಗಡೆಗೊಳಿಸಲಾಯಿತು.

ಎಕೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಎಕೆ ನಿಯಾಝ್ ಅವರು ಬಿಸಿಸಿಐ ಅಧ್ಯಕ್ಷ ಎಸ್ ಎಂ ರಶೀದ್ ಹಾಜಿ, ಕುವೈತ್ ಕೇರಳ ಮುಸ್ಲಿಂ ಅಸೋಸಿಯೇಷನ್ (ಕೆಕೆಎಂಎ) ಮಾಜಿ ಅಧ್ಯಕ್ಷರಾದ ಎನ್ ಎ ಮುನೀರ್, ಫತಾಹ್ ತಯ್ಯಿಲ್, ಎಚ್ ಐ ಎಫ್ ಅಧ್ಯಕ್ಷ ಆದಿಲ್ ಪರ್ವೇಝ್  ಮತ್ತಿತರರ ಉಪಸ್ಥಿತಿಯಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿದರು.‌

ಈ ಸಂದರ್ಭದಲ್ಲಿ ಮಾತನಾಡಿದ ಕೆಕೆಎಂಎ ಮಾಜಿ ಅಧ್ಯಕ್ಷರಾದ ಎನ್ ಎ ಮುನೀರ್ ಅವರು ಎಸ್ ಎಂ ಬಶೀರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿ ಅವರನ್ನು ಒಮ್ಮೆ ಭೇಟಿಯಾದವರು ಎಂದಿಗೂ ಮರೆಯಲಾಗದಂತಹ ಆಕರ್ಷಕ ವ್ಯಕ್ತಿತ್ವ ಅವರದಾಗಿತ್ತು, ಕೆಕೆಎಂಎ ಮೂಲಕ ಸಮುದಾಯಕ್ಕೆ ಅವರು ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಫತಾಹ್ ತಯ್ಯಿಲ್ ಅವರು ಮಾತನಾಡಿ, ಎಸ್ ಎಂ ಬಶೀರ್ ಹೇಗೆ ಪ್ರತಿ ವಿಷಯ ಹಾಗು ಸಮಸ್ಯೆಯನ್ನು ಆಳವಾಗಿ ಅಧ್ಯಯನ ಮಾಡಿ ಅದಕ್ಕೆ ಪರಿಹಾರ ಒದಗಿಸುತ್ತಿದ್ದರು ಹಾಗು ಆ ಪರಿಹಾರವನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು ಎಂದು ತಿಳಿಸಿಕೊಡುತ್ತಿದ್ದರು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಎಸ್ ಎಂ ಬಶೀರ್ ಅವರ ಬದುಕು ಹಾಗು ಸಾಧನೆಗಳ ಕುರಿತ ಡಾಕ್ಯುಮೆಂಟರಿಯನ್ನು ಪ್ರದರ್ಶಿಸಲಾಯಿತು. ಬಿಗ್ ಬಿ ಪುಸ್ತಕ ರಚಿಸಿದ ಹುಸೈನ್ ಶಾಫಿ ಅವರನ್ನು ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಎಸ್ ಎಂ ಬಶೀರ್ ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿ ಎಸ್ ಎಂ ರಶೀದ್ ಹಾಜಿ, ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ ಅಧ್ಯಕ್ಷ ಮೊಹಮ್ಮದ್ ಅಲಿ ಉಚ್ಚಿಲ್, ಎಚ್ ಐ ಎಫ್ ನ ರಿಝ್ವಾನ್ ಪಾಂಡೇಶ್ವರ ಅವರು ಮಾತನಾಡಿದರು.

ಎಸ್ ಎಂ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಎಸ್ ಎಂ ಬಾಷಾ, ಎಸ್ ಎಂ ಫಾರೂಕ್, ಕೆ ಕೆ ಅಬ್ದುಲ್ಲಾಹ್, ಎಹ್ಸಾನ್ ಮಸೀದಿಯ ಖತೀಬ್ ಮೌಲಾನಾ ತಯ್ಯಿಬ್, ಕೆಕೆಎಂಎ, ಬಿಸಿಸಿಐ ಹಾಗು ಎಚ್ ಐ ಎಫ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಕೆ ಶಾಝ್ ಕಾರ್ಯಕ್ರಮ ನಿರೂಪಿಸಿದರು.‌

























 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News