ಮಂಗಳೂರು: ಸಂಜಿತ್ ಎಸ್.ಅಂಚನ್‌ಗೆ ಡಾಕ್ಟರೇಟ್

Update: 2023-11-05 17:26 GMT

ಮಂಗಳೂರು: ಮೈಸೂರಿನ ಎನ್‌ಐಇ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂಜಿತ್ ಎಸ್. ಅಂಚನ್ ಅವರು ಹೊಸದಿಲ್ಲಿಯ ಗೇಟ್ ಎಂಎಚ್‌ಆರ್‌ಡಿ ಸಂಸ್ಥೆಯ ಫೆಲೋಶಿಪ್‌ನೊಂದಿಗೆ ಸುರತ್ಕಲ್ ಎನ್‌ಐಟಿಕೆಯ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ.ಚಿಂತಾ ಶಂಕರರಾವ್ ಮಾರ್ಗದರ್ಶನದಲ್ಲಿ ಮಂಡಿಸಿದ " Robust Multivariable Controller Design for an Activated Sludge Process" ಮಹಾಪ್ರಬಂಧಕ್ಕೆ ಸುರತ್ಕಲ್ ಎನ್‌ಐಟಿಕೆ ಪಿಎಚ್.ಡಿ ಪದವಿ ನೀಡಿ ಗೌರವಿಸಿದೆ.

ಇವರು ಮಂಗಳೂರು ವಿವಿಯ ನಿವೃತ್ತ ಅಧೀಕ್ಷಕ, ಕೊಣಾಜೆಯ ಶ್ರೀಧರ್ ಕೆ. ಮತ್ತು ಜಯಂತಿ ಪದ್ಮಾವತಿ ಎಸ್. ದಂಪತಿ ಪುತ್ರ. 2016ರಲ್ಲಿ ಇವರು ಎಂಐಟಿ ಮಣಿಪಾಲದ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದ ಮೂಲಕ ಯುಪಿಬಿ ವಿಶ್ವವಿದ್ಯಾಲಯ ಕೊಲಂಬಿಯಾದಲ್ಲಿ ಇಂಟರ್ನಿ ಆಗಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದರು. ಭರತನಾಟ್ಯದಲ್ಲಿ ಸೀನಿಯರ್ ಗ್ರೇಡ್ ಪರೀಕ್ಷೆ, ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಗಾಗಿ ಪ್ರತಿಷ್ಠಿತ ರಾಷ್ಟ್ರಪತಿ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಸುರತ್ಕಲ್ ಎನ್‌ಐಟಿಕೆಯಲ್ಲಿ ಶನಿವಾರ ನಡೆದ ೨೧ನೇ ಘಟಿಕೋತ್ಸವದಲ್ಲಿ ಪದವಿ ಸ್ವೀಕರಿಸಿದರು. ರಕ್ಷಣಾ ಸಚಿವರ ಮಾಜಿ ವೈಜ್ಞಾನಿಕ ಸಲಹೆಗಾರ, ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಒ) ಅಧ್ಯಕ್ಷ ಡಾ.ಸತೀಶ್ ರೆಡ್ಡಿ. ಸಿಎಸ್‌ಐಆರ್- ಎನ್‌ಐಐಎಸ್ಟಿ ನಿರ್ದೇಶಕ ಡಾ.ಸಿ.ಆನಂದರಾಮ ಕೃಷ್ಣನ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News