ಮಂಗಳೂರು: ಡ್ರಗ್ ಪೆಡ್ಲರ್ ಸೆರೆ

Update: 2023-12-11 14:28 GMT

ಆಶಿತ್ ಯಾನೆ ಅಶ್ವಿತ್

ಮಂಗಳೂರು: ನಿಷೇಧಿತ ಮಾದಕ ವಸ್ತು Methamphetamine ನ್ನು ಪೂರೈಕೆ ಮಾಡಿದ್ದ ಆರೋಪದ ಮೇರೆಗೆ ಡ್ರಗ್ ಪೆಡ್ಲರ್ ಆಶಿತ್ ಯಾನೆ ಅಶ್ವಿತ್ ಯಾನೆ ಆಶು ಎಂಬಾತನನ್ನು ಡ್ರಗ್ ತಡೆ ತಂಡವು ಸೋಮವಾರ ಬಂಧಿಸಿದೆ.

ಉಳ್ಳಾಲ ತಾಲೂಕಿನ ಪೆರ್ಮನ್ನೂರು ಗ್ರಾಮದ ಸಂತೋಷ ನಗರದ ಸಾರ್ವಜನಿಕ ರಸ್ತೆಯ ಬದಿ ಸುಮಾರು 132 ಗ್ರಾಂ ತೂಕದ Methamphetamine ಮತ್ತು 250 LSD ಈ ಸ್ಟ್ಯಾಂಪ್ ಡ್ರಗ್ಗನ್ನು ಸಾಗಾಟ ಮಾಡಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಶಿಶಿರ್ ದೇವಾಡಿಗ ಮತ್ತು ಶುಶಾನ್ ಎಲ್. ಎಂಬವರನ್ನು ಡಿ.4ರಂದು ಮಂಗಳೂರು ದಕ್ಷಿಣ ಉಪವಿಭಾಗದ ಉಪಾಯುಕ್ತೆ ಧನ್ಯಾ ವಿ. ನಾಯಕ್ ನೇತೃತ್ವದ ತಂಡವು ಬಂಧಿಸಿತ್ತು.

ಈ ಆರೋಪಿಗಳಿಗೆ ಮಾದಕ ವಸ್ತುವನ್ನು ನೀಡಿರುವ ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಡ್ರಗ್ ಪೆಡ್ಲರ್ ಆಶಿತ್ ಯಾನೆ ಅಶ್ವಿತ್ ಯಾನೆ ಆಶು ಎಂಬಾತನನ್ನು ಕೋಟೆಕಾರು ಗ್ರಾಮದ ಮಾಡೂರು ಸಾಯಿ ಮಂದಿರದ ಸಮೀಪದ ಗ್ರೌಂಡ್ ಬಳಿ ಬಂಧಿಸಿದ್ದಾರೆ.

ಆರೋಪಿಯಿಂದ ಸುಮಾರು 100 ಗ್ರಾಂ ತೂಕದ 6 ಲಕ್ಷ ರೂ. ಮೌಲ್ಯದ ಎಂಡಿಎಂಎ, ಸುಮಾರು 600 ಗ್ರಾಂ ತೂಕದ 30 ಲಕ್ಷ ರೂ. ಮೌಲ್ಯದ ಗಾಂಜ, 1 ಲಕ್ಷ ರೂ.ಮೌಲ್ಯದ ದ್ವಿಚಕ್ರ ವಾಹನ ಸಹಿತ 7.77 ಲಕ್ಷ ರೂ. ಮೌಲ್ಯದ ಸೊತ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣೆಯ ಇನ್‌ಸ್ಪೆಕ್ಟರ್ ಬಾಲಕೃಷ್ಣ ಹೆಚ್.ಎನ್, ಉಳ್ಳಾಲ ಠಾಣೆಯ ಎಸ್ಸೈ ಶೀತಲ್ ಅಲಗೂರ ಮತ್ತು ಸಂತೋಷ ಕುಮಾರ್ ಡಿ. ಮತ್ತು ಡ್ರಗ್ ತಡೆ ತಂಡದ ಎಸ್ಸೈ ಪುನಿತ್ ಗಾಂವ್ಕರ್, ಎಚ್‌ಸಿಗಳಾದ ಸಾಜು ನಾಯರ್, ಮಹೇಶ್, ಪೊಲೀಸ್ ಕಾನ್‌ಸ್ಟೇಬಲ್‌ಗಳಾದ ಶಿವಕುಮಾರ್, ಅಕ್ಬರ್ ಯಡ್ರಾಮಿ ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News