ಮಂಗಳೂರು: ರಚನಾ'ದಿಂದ ಮಾಹಿತಿ ಕಾರ್ಯಾಗಾರ

Update: 2023-07-28 11:14 GMT

ಮಂಗಳೂರು: ಕ್ಯಾಥೋಲಿಕ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿರಚನಾ'ದಿಂದ ಎಂಸಿಸಿ ಬ್ಯಾಂಕ್‌ ಸಭಾಂಗಣದಲ್ಲಿ 'ಮೈಂಡ್ ಮ್ಯಾಪಿಂಗ್ ಮತ್ತು ವರ್ಕ್ ಲೈಫ್ ಬ್ಯಾಲೆನ್ಸಿಂಗ್ ಕುರಿತು ಮಾಹಿತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮಕ್ಕೆ ಗೌರವ ಭಾಷಣಕಾರರಾಗಿ ಆಗಮಿಸಿದ್ದ ಖ್ಯಾತ ವಾಗ್ಮಿ ಡಾ. ಸರ್ಫರಾಜ್, ಜೆ . ಹಸೀನ್ ಅವರು ಮಾತನಾಡಿ, ನಿಮ್ಮ ಜೀವನದ ಮೇಲೆ ಪ್ರಭಾವ ಬೀರಲು ಮತ್ತು ನಿರ್ಧರಿಸಲು ನೀವೇ ಉತ್ತಮ ವ್ಯಕ್ತಿ. ನೀವು ಧನಾತ್ಮಕವಾಗಿ ಯೋಚಿಸಿದರೆ, ನಿಮ್ಮ ಉಪ ಪ್ರಜ್ಞೆಯು ಸಕಾರಾತ್ಮಕ ಆಲೋಚನೆಗಳನ್ನು ರೂಪಿಸುತ್ತದೆ. ನೀವು ನಕಾರಾತ್ಮಕವಾಗಿ ಯೋಚಿಸಿದರೆ, ಅದೇ ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ' ಎಂದರು.

ಒಬ್ಬರನ್ನೊಬ್ಬರು ಕ್ಷಮಿಸಿ, ಪ್ರೀತಿಸಿ, ಸಕಾರಾತ್ಮಕ ಚಿಂತನೆ ನಡೆಸಿದರೆ, ನಮ್ಮ ವ್ಯಕ್ತಿತ್ವ, ಸಂಪೂರ್ಣ ಬದಲಾಗುತ್ತದೆ. ನಾವು ನಮ್ಮ ಜೀವನವನ್ನು ಸಕಾರಾತ್ಮಕವಾಗಿ ತೆಗೆದುಕೊಂಡರೆ ಮತ್ತು ಸಕಾರಾತ್ಮತೆಯನ್ನು ಅಭ್ಯಾಸ ಮಾಡಿದರೆ, ಎಲ್ಲವೂ ಸಂಪೂರ್ಣವಾಗಿ ಬದಲಾಗುತ್ತದೆ ಎಂದು ಡಾ. ಸರ್ಫರಾಜ್ ತಿಳಿಸಿದರು.

ರಚನಾ ಅಧ್ಯಕ್ಷರಾದ ಶ್ರೀ ವಿನ್ಸೆಂಟ್ ಕುಟಿನ್ಹಾ ಸ್ವಾಗತಿಸಿದರು, ಆಡಳಿತ ಮಂಡಳಿಯ ಸದಸ್ಯ ಶ್ರೀ ಚಾರ್ಲ್ಸ್ ಪಾಯ್ಸ್ ಉಪನ್ಯಾಸಕರನ್ನು ಪರಿಚಯಿಸಿದರು. ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಲೆಸ್ಲಿ ರೇಗೋ ಕಾರ್ಯಕ್ರಮ ನಿರೂಪಿಸಿದರು.

ಎಂಸಿಸಿ ಬ್ಯಾಂಕಿನ ನಿರ್ದೇಶಕರಾದ ಶ್ರೀ. ಅನಿಲ್‌ ಲೋಬೋ ಉಪಸ್ಥಿತರಿದ್ದರು. ಸುಮಾರು 60 ಜನರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News